ವಿಕಲಚೇತನರಿಗೆ ಮಹಾನಗರ ಪಾಲಿಕೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುವ ಭರವಸೆ :ಧುಮಾಳೆ

ವಿಜಯಪುರ, ಡಿ.27-ಮಹಾನಗರ ಪಾಲಿಕೆ ವಿಜಯಪುರ ಹಾಗೂ ಬಿಜಾಪೂರ ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆ ಇವರುಗಳು ಸಹಯೋಗದೊಂದಿಗೆ ನಗರ ಪ್ರದೇಶದಲ್ಲಿರುವ ವಿಕಲಚೇತನರಿಗೆ ಕಾನೂನು ಅರಿವು ಕಾರ್ಯಕ್ರಮವನ್ನು ನಗರದ ಬಾಲಕೃಷ್ಣ ಮಂಗಲ ಕಾರ್ಯಾಲಯದಲ್ಲಿ ಜರಗಿತು.
ಈ ಕಾರ್ಯಕ್ರವನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯ ಆನಂದ ಧುಮಾಳೆ ಉದ್ಘಾಟಿಸಿ ಮಾತನಾಡಿ ವಿಕಲಚೇತನರಿಗೆ ನಮ್ಮ ಮಹಾನಗರ ಪಾಲಿಕೆಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿಕೊಡುತ್ತೇನೆ ಮತ್ತು ಅವರಗೆ ನನ್ನಿಂದ ಯಾವುದಾದರು ಸಹಾಯ ಸಹಕಾರ ಬೇಕಾದಾರೆ ಮಾಡುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲ್ತಾಫ್ ಇಟಗಿ ಮಾಜಿ ಮಹಾನಗರ ಪಾಲಿಕೆ ಸದಸ್ಯರು ವಿಕಲಚೇತನರಿಗೆ ಬರುವಂತ ದಿನಗಳು ವಿಕಲಚೇತನರಿಗೆ ಇನ್ನೂ ಹೊಸ ಯೋಜನೆಗಳನ್ನು ರೂಪಸಿ ಅವರಿಗೆ ದೊರಕಿಸಿಕೊಡುವಂತೆ ಮಾಡುತ್ತೇನೆ. ಹೇಳಿದರು.
ಬಿ.ಡಿ.ಪಿ.ಎಚ್.ಡಬ್ಲ್ಯೂ ಸಂಸ್ಥೆ ಖಜಾಂಚಿಗಳು ಮಾತನಾಡಿ ವಿಕಲಚೇತನರಿಗೆ ಎಲ್ಲಾ ಇಲಾಖೆ ಇಲಾಖೆಯಲಿ ಶೇ 5ರಷ್ಡು ಇವರುವ ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಸ್ವಾಲಂಬನೆಯಾಗಬೇಕೆಂದು ಹೇಳಿದರು.
ಗುರುಶಾಂತ ಹಿರೇಮಠವರು ವಿಕಲಚೇತನರ 2016ರ ಕಾನೂನು ಕಾಯ್ದೆ ಮತ್ತು ಹಕ್ಕುಗಳ ಸಂಪೂರ್ಣವಾಗಿ ತಿಳಿಸಿದರು.