ವಿಕಲಚೇತನರಿಗೆ ಫುಡ್ ಕಿಟ್ ವಿತರಿಸಿದ ಶಾಸಕರು

ಜಗಳೂರು.ಜೂ.೮;  ಪಟ್ಟಣದಲ್ಲಿ ತಾಲೂಕು ಕಚೇರಿ ಆವರಣದಲ್ಲಿ ವಿಕಲಚೇತನ 50 ಕುಟುಂಬಗಳಿಗೆ ಫುಡ್ ಕಿಟ್ ಗಳನ್ನು ಶಾಸಕ ಎಸ್.ವಿ ರಾಮಚಂದ್ರ  ವಿತರಣೆ ಮಾಡಿದರು ನಂತರ ಮಾತನಾಡಿದ ಅವರು ನಮ್ಮ ತಾಲೂಕಿನಲ್ಲಿ ಯಾರು ಹಸಿವಿನಿಂದ ನರಳಬಾರದು ಮತ್ತು ಅಂಗವಿಕಲರು ಗೋಸಾಯಿ ಸಮುದಾಯದವರು ಅಲೆಮಾರಿ ಜನಾಂಗದವರ ದಿನದಿಂದ ದಿಂದ ಹಳ್ಳಿಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿ
ಕೊಂಡು ಜೀವನ ನಡೆಸಬೇಕಾಗಿತ್ತು ರಾಜ್ಯ ಸರ್ಕಾರ ಇತರರ ಮಹಾಮಾರಿ ಹೋಗಲಾಡಿಸಲು ಲಾಕ್ ಡೌನ್ ಅನಿವಾರ್ಯತೆ ಎದುರಾಗಿದೆ ಈ ಸಂದರ್ಭದಲ್ಲಿ ಅವರ ಜೀವನ ತುಂಬಾ ಕಷ್ಟವಾಗಿದೆ ಇದನ್ನು ಗಮನಿಸಿ ನನ್ನ ವೈಯಕ್ತಿಕ ಸ್ವಂತ ಹಣದಿಂದ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ ಮಾಡುತ್ತಿದ್ದೇನೆ ಸಾರ್ವಜನಿಕರು ಕೊರೋನ ವೈರಸ್ ಗೆ ಭಯಪಡಬಾರದು ಜಾಗೃತಿ ಮತ್ತು ಎಚ್ಚರಿಕೆ ಗ್ರಾಮೀಣ ಗ್ರಾಮೀಣ ಭಾಗಗಳಲ್ಲಿ ಈ ವೈರಸ್ ಬಹುಬೇಗ ಹಬ್ಬುತ್ತಿದೆ  ಹಳ್ಳಿಯ ಜನರು ಕೋರೋನ ಲಕ್ಷಣಗಳಾದ ಕೆಮ್ಮು ನೆಗಡಿ ಜ್ವರ ಮೈ.ಕೈ ಸುಸ್ತು ಈ ತರದ ಲಕ್ಷಣ ಕಂಡು ಬಂದರೆ ಕೂಡಲೇ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿ ಕೊಂಡು ಸರಿಯಾದ ಔಷಧಿಯನ್ನು ತೆಗೆದುಕೊಳ್ಳಬೇಕು ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಹಾಕಬೇಕು ಮತ್ತು ತಮ್ಮ ಕೈಗಳನ್ನು  ಸ್ಯಾನಿಟೈಜರ್ ಮತ್ತು ಸಾಬೂನಿನಿಂದ ಆಗಾಗ ತೊಳೆಯಬೇಕು ನಿಮ್ಮ  ಆರೋಗ್ಯ ನಿಮ್ಮ ಕೈಯಲ್ಲಿದೆ ಎಂದರು ಈ ಸಂದರ್ಭದಲ್ಲಿ ತಹಸಿಲ್ದಾರ್ ಗಿರೀಶ್ ಬಾಬು.ಸಮಾಜ ಕಲ್ಯಾಣ ಇಲಾಖೆಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಉಪ ತಹಶೀಲ್ದಾರ್ ರಾಮಚಂದ್ರಪ್ಪ ಇತರರಿದ್ದರು