ವಿಕಲಚೇತನರಿಗೆ ತ್ರಿಚಕ್ರ ಸೈಕಲ್  ವಿತರಿಸಿದ  ಶಾಸಕ ನಾಗೇಂದ್ರ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.18: ಗ್ರಾಮೀಣ ಶಾಸಕ  ಬಿ.ನಾಗೇಂದ್ರ ಅವರು ತಮ್ಮ ಕಛೇರಿಯಲ್ಲಿ ವಿಕಲಚೇನತರಿಗೆ  ಶಾಸಕರ ಅನುದಾನದಡಿ  ತ್ರಿಚಕ್ರ ಸೈಕಲ್ ಗಳನ್ನು ತಾಲೂಕಿನ ಎಂ.ಗೋನಾಳು ಗ್ರಾಮದ ಬಾರಕೇರ ಗಣೇಶ, ಬಿ. ಬೆಳಗಲ್ಲು ಗ್ರಾಮದ ಸುಗ್ಲಮ್ಮ  ಹಾಗೂ ರಾಮಾಂಜನಿ ಅವರಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್ಯ ಶಾಸಕ ಬಿ.ನಾಗೇಂದ್ರ ಅವರು ವಿಕಲಚೇತನರು ಪ್ರತಿನಿತ್ಯ ಓಡಾಟ ನೆಡಸಲು ಕಷ್ಟಪಡುವುದನ್ನು ನಾವೆಲ್ಲ ನೋಡಿದ್ದೇವೆ. ಸರ್ಕಾರದಿಂದ ನೀಡಿರುವ ತ್ರಿಚಕ್ರ ಸೈಕಲ್ ವಿಕಲಚೇನರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಸಹಾಯಕಾರಿಯಾಗಿದೆ‌ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿ.ವೆಂಕಟೇಶ್ ಪ್ರಸಾದ್, ಅಣ್ಣ ನಾಗರಾಜ್, ಗೋವರ್ಧನ್ ರೆಡ್ಡಿ, ಸಿಂಧುವಾಳ್ ಗಾದಿಲಿಂಗನಗೌಡ, ಗೋನಾಳ್ ನಾಗಭೂಷಣ ಗೌಡ, ಬೆಣಕಲ್ ಬಸವರಾಜ್ ಗೌಡ, ಯರಗುಡಿ ಮುದಿ ಮಲ್ಲಯ್ಯ, ಶ್ರೀನಾಥ್, ಹಗರಿ ಗೋವಿಂದ, ದುರುಗಣ್ಣ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಹಾಜರಿದ್ದರು.