ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಿಸಿದ ದರ್ಶನಾಪುರ

ಶಹಾಪೂರ:ಸೆ.2:ಅಂಗವಿಕಲರು ಕುಗ್ಗದೆ ಎಲ್ಲರಂತೆ ಜೀವನದ ಪಯಣ ಮುನ್ನಡಿಸಬೇಕು ಎಂಬ ಉದ್ದೇಶದಿಂದ ಅವರಿಗಾಗಿ ವಿಶೇಷ ವಾಹನದ ವ್ಯವಸ್ಥೆ ಇದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ್ ಹೇಳಿದರು.

ನಗರದ ಶಾಸಕರ ಕಛೇರಿಯಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ ಮತ್ತು ಹಿರಿಯ ನಾಗರಿಕರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆರು ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಅವರು ಅಂಗವಿಕಲರ ಮೇಲೆ ನಮಗೆ ಕರುಣೆಯ ಜೊತೆಗೆ ಅವರಿಗೆ ಧೈರ್ಯ ತುಂಬುವ ಮೂಲಕ ಸ್ವಂತವಾಗಿ ದುಡಿಮೆ ಮಾಡುವ ಶಕ್ತಿ ನೀಡಬೇಕೆಂಬ ದೃಷ್ಟಿಯಲ್ಲಿ ವಾಹನಗಳನ್ನು ನೀಡಲಾಗಿದ್ದು ಸಾಮಾನ್ಯ ಜನರಂತೆ ಓಡಾಡಲು ಅನುಕೂಲವಾಗಲಿದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಅಂಗವೈಕಲ್ಯ ಯಾವುದೇ ಕಾರಣಕ್ಕೂ ತೊಡಕಾಗುವುದಿಲ್ಲ ಎಂದರು. ಈ ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಲು ಎಲ್ಲರ ಸಹಕಾರ ಅವರ ಮೇಲೆ ಇರಲಿ ಅಂಗವಿಕಲ್ಯಾ ಯಾವುದೇ ಸಾಧನೆ ಮಾಡುವವರಿಗೆ ಇದು ಯಾವುದು ಅಡ್ಡಿ ಬರುವುದಿಲ್ಲ ಎಷ್ಟು ಜನ ಸಾಧನೆ ಮಾಡಿ ಸಾಧಕರಾದವರು ಇದ್ದಾರೆ ಮತ್ತು ದೇವರು ಅವರಿಗೆ ವಿಶಿಷ್ಟವಾದ ಯಾವುದೋ ಒಂದು ಶಕ್ತಿಯನ್ನು ಅವರಲ್ಲಿ ಕೊಟ್ಟಿರುತ್ತಾನೆ ಎಂದು ಹೇಳಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಬಸವರಾಜ, ಚೆನ್ನೂರ್, ನಾಗಮ್ಮ ಜಾಕಾತಿ ,ನಾಗರಾಜ ಎಂಆರ್ ಡಬ್ಲ್ಯೂ, ಅಶೋಕರಾವ್ ಮಲ್ಲಾಬಾದಿ, ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಸಾಹೇಬ್ ಜಾನಿ, ಸೇರಿದಂತೆ ಅನೇಕ ಯುವಕರು ಇದ್ದರು