ವಿಕಲಚೇತನರಿಗೆ ಆಹಾರ ಕಿಟ್ ವಿತರಿಸಿದ ಯಾಕಾಪೂರ

ಚಿಂಚೋಳಿ,ಮೇ.26- ಕೋವಿಡ್ ಲಾಕ್‍ಡೌನ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಿಕಲಚೇತನರಿಗೆ ನೆರವಾಗಲು ಮುಂದಾದ ಜೆಡಿಎಸ್ ಪಕ್ಷದ ಮುಖಂಡರಾದ ಸಂಜೀವನ ಯಾಕಾಪೂರ್ ಅವರು, ತಾಲೂಕಿನ ಎಲ್ಲಾ ಅಂಗವಿಕಲರಿಗೆ ಆಹಾರ ಕೀಟಗಳನ್ನು ವಿತರಿಸಿದರು.
ಆಹಾರ ಕಿಟಗಳನ್ನು ವಿತರಿಸಿ ಮಾತನಾಡಿದ ಸಂಜೀವನ ಯಾಕಾಪೂರ್ ಅವರು, ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಮತ್ತು ಲಾಕ್‍ಡೌನ್ ಘೋಷಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ಥರಿಗೆ ನೆರವು ನೀಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.
ಕೋವಿಡ್ ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯದ ಸರ್ಕಾರ ಘೋಷಿಸಿರುವ ಪ್ಯಾಕೇಜನಲ್ಲಿ ಅಂಗವಿಕಲರನ್ನು ಕಡೆಗಣಿಸಿದೆ ಎಂದರು.
ಚಿಂಚೋಳಿ ತಾಲೂಕಿನಲ್ಲಿ ಕೊರೊನಾ ಸೋಂಕು ದಿನದಿನಕ್ಕೆ ಹೆಚ್ಚಾಗುತ್ತಿದ್ದರೆ ಇಂದ ತಾಲೂಕಿನ ಜನರು ಭಯ ಭೀತರಾಗಿದ್ದಾರೆ ಭಯ ಮತ್ತು ಆತಂಕ ಪಡಬೇಡಿ, ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸುವಂತೆ ಕರೆನೀಡಿದರು.
ಈ ಸಂದರ್ಭದಲ್ಲಿ. ಜೆಡಿಎಸ್ ಪಕ್ಷದ ತಾಲೂಕ ಅಧ್ಯಕ್ಷರಾದ ರವಿಶಂಕರರೆಡ್ಡಿ ಮುತ್ತಂಗಿ. ಜೆಡಿಎಸ್ ಪಕ್ಷದ ಮುಖಂಡರಾದ ವಿಷ್ಣುಕಾಂತ್ ಮೂಲಗಿ. ಪುರಸಭೆ ಸದಸ್ಯರಾದ ನಾಗಿಂದ್ರಪ್ಪ ಗುರಂಪಳ್ಳಿ. ಬಸವರಾಜ್ ಸಿರಸಿ. ಹಣಮಂತ ಪೂಜಾರಿ. ಬಕ್ಕಪ್ರಭು ಪಾಟೀಲ್. ಗುರುನಂಜೇಶ್ ಕೋಣಿನ್. ಎಸ್. ಕೆ. ಮುಕ್ತಾರ್. ಮಗದುಮ ಖಾನ್. ಮಾಜಿದ ಪಟೇಲ್. ದವಲಪ್ಪ ಸುಣಗಾರ. ಶೇಕ ಅಮೀರ್. ಅಯ್ಯುಬ್ ಚಿಂಚೋಳಿ. ಮಂಜೂರ್ ಅಹಮದ. ಅರುಣ್ ಕುಮಾರ್. ಪವನ್ ಯಾಳಗಿ. ಪವನ್ ಪಾಟೀಲ್. ಸಂತೋಷ್ ಬೊಮ್ಮನಹಳ್ಳಿ. ಮತ್ತು ಜೆಡಿಎಸ್ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.