ವಿಕಲಚೇತನರಿಗೆ ಅವಕಾಶ ಕಲ್ಪಿಸಲು ಕರೆ


ಸಂಜೆವಾಣಿ ವಾರ್ತೆ
ಸಂಡೂರು : ಡಿ:3: ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ಮುಖ್ಯ ಶಿಕ್ಷಕ ಯು.ಮಲ್ಲಿಕಾರ್ಜುನ ತಿಳಿಸಿದರು.
ಅವರು ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರರಾಷ್ಟ್ರೀಯ ವಿಕಲಚೇತನರ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು, ಕಾರ್ಯಕ್ರಮವನ್ನು ಶಾಲೆಯ ಮುಖ್ಯ ಶಿಕ್ಷಕ ಯು. ಮಲ್ಲಿಕಾರ್ಜುನ ಅವರು ಉದ್ಘಟನೆ ಮಾಡಿ ಮಾತನಾಡುತ್ತಾ ವಿಕಲಚೇತನರಿಗೆ ಅನುಕಂಪದ ಅವಶ್ಯಕತೆ ಇಲ್ಲ, ಆದರೆ ಅವಕಾಶಗಳ ನೀಡಬೇಕು ಎಂದು ಅವರು ತಿಳಿಸಿದರು,
 ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡುತ್ತಾ ವಿಕಲಚೇತನರು ಒಂದಿಲ್ಲೊಂದು ವಿಚಾರದಲ್ಲಿ ಅದಮ್ಯ ಕೌಶಲ್ಯನ್ನು ಹೊಂದಿರುತ್ತಾರೆ, ಅವರಿಗೆ ಎಲ್ಲರಂತೆ ಎಲ್ಲಾ ವಿಭಾಗಗಳಲ್ಲಿ ಅವಕಾಶ ಮಾಡಿ ಕೊಟ್ಟಾಗ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ, ಆರೋಗ್ಯ ಇಲಾಖೆಯಿಂದ ದೃಷ್ಟಿ ದೋಷ ಉಳ್ಳವರಿಗೆ ಕನ್ನಡಕ, ಶ್ರವಣ ದೋಷವನ್ನು ಉಳ್ಳವರಿಗೆ ಕಾಕ್ಲಿಯರ್ ಇಂಪ್ಲಾಂಟ್ ನಂತಹ ಸೂಕ್ತ ಸಾಧನ ಸಲಕರಣಗಳನ್ನು ಒದಗಿಸುವುದು, ಅಪೌಷ್ಟಿಕ ಮಕ್ಕಳಿಗೆ ಪೌಷ್ಟಿಕಾಹಾರ ಒದಗಿಸುವುದು,ಸಂಘ ಸಂಸ್ಥೆಗಳ ಸಹಕಾರದಿಂದ ಕೃತಕ ಅಂಗಾಂಗ ಜೋಡಣೆ ಯನ್ನು ಒದಗಿಸುವ ಕಾರ್ಯದಲ್ಲಿ ಮುಂದಾದರೆ ವಿಕಲಚೇತನರಿಂದ ವಿಶೇಷ ಕೊಡುಗೆಯನ್ನು ಆಶಿಸಬಹುದು, ಅಲ್ಲದೇ ಮೊನ್ನೆ ನಡೆದ ಕ್ರೀಡೆಗಳಲ್ಲಿ ಪದಕಗಳ ಪಟ್ಟಿ ನೋಡಿದರೆ ಹೆಮ್ಮೆಯಾಗುತ್ತದೆ, ಜನ್ಮಜಾತ ಅಂಗವಿಕಲತೆಯನ್ನು ಬೇಗ ಪತ್ತೆ ಹಚ್ಚುವುದು, ಮತ್ತು ನಿಯಂತ್ರಣ ಮಾಡುವುದು,ಹಾಗೂ ಅಪಘಾತ ಸಂಭಂದಿಸಿದ ಅಂಗವಿಕಲತೆ ಹೊಂದಿರುವರಿಗೆ ಚಿಕಿತ್ಸೆ ಮತ್ತು ವಾಹನ, ಬಸ್,ರೈಲ್ವೆ ಪಾಸ್ ಗಳನ್ನು ಒದಗಿಸುವ ಹಾಗೂ ನಾವೀನ್ಯ ಹೊಂದಿದ ಅಂಗಾಂಗ ಜೋಡಣೆಂತಹ ಕಾರ್ಯ ಮಾಡಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ, ಹಾಗೆ ವಿಶ್ವ ಏಡ್ಸ್ ದಿನ ಅಂಗವಾಗಿ ಹೆಚ್.ಐ.ವಿ ಬಗ್ಗೆ ಅರಿವು ನೀಡಲಾಯಿತು,
 ಈ ಸಂದರ್ಭದಲ್ಲಿ ಮ್ಯಾಜಿಕ್ ಬಸ್‍ನ ಎಲ್.ಎಸ್.ಇ ಸೌಮ್ಯ ಮಾತನಾಡಿ ಮಕ್ಕಳಿಗೆ ವಿಶೇಷವಾಗಿ ಕೌಶಲ್ಯಗಳ ಮೂಲಕ ವಿದ್ಯೆಯನ್ನು ಕಲಿಸಿಕೊಡುವುದು ಮುಖ್ಯ ಉದ್ದೇಶವಾಗಿದೆ, ಮಕ್ಕಳನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಚಟುವಟಿಕೆಗಳನ್ನು ನಡೆಸಿ ವಿಜೇತರಿಗೆ ಜೆ.ಎಸ್.ಡಬ್ಲ್ಯೂ ಫೌಂಡೇಶನ್‍ನ ಆಸ್ಪೈರ್ ಸಂಸ್ಥೆಯ ವತಿಯಿಂದ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು, ಎ.ಇ ದುರ್ಗಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು,
ಈ ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ವಿಶ್ವನಾಥ್, ಉಜ್ವಲ,ಶಿವರುದ್ರಮ್ಮ,ದುರ್ಗಾ,ಸೌಮ್ಯ ಅಂಗನವಾಡಿ ಕಾರ್ಯಕರ್ತೆ ಜಯಪ್ರದ, ಭಾಗ್ಯ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು