ವಿಕಲಚೇತನರಿಗಾಗಿ ಆಳಂದ್,ಸೇಡಂದಲ್ಲಿ ತರಬೇತಿ ಮತ್ತು ಉದ್ಯೋಗ ಆಯ್ಕೆ ಶಿಬಿರ

ಕಲಬುರಗಿ.ಜು.27:2022-2023ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 1000 ವಿಕಲಚೇತನರನ್ನು ಗುರುತಿಸಿ ಅವರಲ್ಲಿ 200 ವಿಕಲಚೇತನರಿಗೆ ಅಸೋಸಿಯೇಷನ್ ಆಪ್ ಪೀಪಲ್ಸ್ ವಿತ್ ಡಿಸೆಬಿಲಿಟಿ ಸಂಸ್ಥೆಯ ಮೂಲಕ ಕೌಶಲ್ಯ ತರಬೇತಿ ನೀಡಿ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡಲಾಗುವುದು ಎಂದು ಸಂಸ್ಥೆಯ ನೇಮಕಾತಿ ಅಧಿಕಾರಿ ಮಂಜುನಾಥ್ ವಿ. ಲೋಕಾಪುರ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆದ್ದರಿಂದ ಆಳಂದ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜುಲೈ 29ರಂದು ಹಾಗೂ ಸೇಡಂ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜುಲೈ 30ರಂದು ತರಬೇತಿ ಹಾಗೂ ಉದ್ಯೋಗ ಆಯ್ಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ತರಬೇತಿಗಾಗಿ ಅಂಗವಿಕಲರ ಗುರುತಿನ ಚೀಟಿ, ಶೈಕ್ಷಣಿಕ ದಾಖಲಾತಿಗಳು (ವರ್ಗಾವಣೆ ಪತ್ರ ಮತ್ತು ಅಂಕಪಟ್ಟಿ), ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ರೇಷನ್ ಕಾರ್ಡ್, ಆದಾಯ ಪ್ರಮಾಣಪತ್ರ ಮತ್ತು ಜಾತಿ ಪ್ರಮಾಣಪತ್ರ, ಪಾನ್ ಕಾರ್ಡ್, ಬ್ಯಾಂಕ್ ಖಾತೆಯ ವಿವರ, ಹತ್ತು ಸ್ಟಾಂಪ್ ಸೈಜ್‍ನ ಭಾವಚಿತ್ರಗಳು,, ಐದು ಪಾಸ್‍ಪೋರ್ಟ್ ಸೈಜ್ ಭಾವಚಿತ್ರಗಳು, ತರಬೇತಿ ನೇಮಕಾತಿ ಪತ್ರಗಳನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ 18ರಿಂದ 35 ವರ್ಷದ ವಿಕಲಚೇತನರು ಅಂಕಿ, ಅಂಶಗಳ ಪ್ರಕಾರ 8000 ಯುವ ವಿಕಲಚೇತನರು ಇದ್ದಾರೆ. ಅವರು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಗ್ರಾಮೀಣ ಮಟ್ಟದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಮುಗಿಸಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಇದ್ದಾರೆ. ಶಿಕ್ಷಣ ಪಡೆದರೂ ಕೂಡ ಉದ್ಯೋಗ ಅವಕಾಶಗಳು ಅವರಿಗೆ ದೊರಕುತ್ತಿಲ್ಲ. ಕಾರಣ ಯುವಕರಿಗೆ ಕೌಶಲ್ಯದ ಕೊರತೆ ಇದ್ದು, ಸರಿಯಾದ ಸಂಘ- ಸಂಸ್ಥೆಗಳ ಸಹಾಯ ಹಸ್ತ ಇಲ್ಲದ ಕಾರಣ ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದು ಅವರು ಹೇಳಿದರು.
ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಎಂಆರ್‍ಡಬ್ಲು ಹಾಗೂ ವಿಆರ್‍ಡಬ್ಲೂ ಮತ್ತು ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬೆಲಿಟಿ ಸಹಯೋಗದಲ್ಲಿ ಜಿಲ್ಲೆಯ ನಿರುದ್ಯೋಗ ವಿಕಲಚೇತನರನ್ನು ಗುರುತಿಸಿ ಅವರಿಗೆ ಕೌಶಲ್ಯಗಳನ್ನು ನೀಡಿ ಉದ್ಯೋಗವಕಾಶ ಒದಗಿಸಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ರಾಯಚೂರು, ಕಲಬುರ್ಗಿ, ಬೀದರ್ ಮತ್ತು ಕೊಪ್ಪಳ್ ಜಿಲ್ಲೆಗಳಲ್ಲಿ 300 ನಿರುದ್ಯೋಗಿ ವಿಕಲಚೇತನರನ್ನು ಗುರುತಿಸಿ ಅವರಿಗೆ ಸಂಸ್ಥೆಯ ಮುಖಾಂತರ ತರಬೇತಿ ಮತ್ತು ಉದ್ಯೋಗ ಕಲ್ಪಿಸಲಾಗಿದೆ. ಅವರೆಲ್ಲರೂ ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಪೋಷಕರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಸ್ತುತ ಕಂಪೆನಿಗಳಾದ ರಿಲೈನ್ಸ್, ವಿಶಾಲ್ ಮೆಗಾ ಮಾರ್ಟ್, ಸ್ಟಾರ್ ಬಜಾರ್, ಆದಿತ್ಯಾ ಬಿರ್ಲಾ ಕಂಪೆನಿ, ವಿಂದ್ಯಾ ಇನ್ಪೋ ಮೀಡಿಯಾ, ಜಾಗ್ವಾರ್, ವಾಸುದೇವ್ ಅಡಿಗಾಸ್, ಮತ್ತು ಮಿಟ್ಟಿ ಕೆಪೆ ಮುಂತಾದವುಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ ಅವರು, ಹೆಚ್ಚಿನ ಮಾಹಿತಿಗಾಗಿ ಮಂಜುನಾಥ್ ಲೋಕಾಪುರ ಅವರ 7795485585 ಹಾಗೂ ನಿರಂಜನ್ ಟಿ., ಅವರ 9620110269 ಮೊಬೈಲ್ ನಂಬರುಗಳಿಗೆ ಸಂಪರ್ಕಿಸಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ನಿರಂಜನ್ ಟಿ., ಅವರು ಉಪಸ್ಥಿತರಿದ್ದರು.