ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ

ಗುಳೇದಗುಡ್ಡ ಏ.14- 18ವರ್ಷ ಮೀರಿದ ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಕಡ್ಡಾಯವಾಗಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಅತ್ಯಂತ ಮಹತ್ವವಿದೆ ಎಂಬುದನ್ನು ಸಾರಿ, ಮತದಾರರಲ್ಲಿ ಜಾಗೃತಿ ಮೂಡಿಸಲು, ವಿಕಲಚೇತನರು ಬೈಕ್ ರ್ಯಾಲಿ ನಡೆಸಿದರು.
ಪುರಸಭೆಯಿಂದ ಪ್ರಾರಂಭಗೊಂಡ ವಿಕಲಚೇತನರ ಬೈಕ್ ರ್ಯಾಲಿಗೆ ಪುರಸಭೆ ಮುಖ್ಯಾಧಿಕಾರಿ ಎನ್.ಎಂ. ಕಂದಗಲ್ ಚಾಲನೆ ನೀಡಿದರು. ಬಳಿಕ ಬೈಕ್ ರ್ಯಾಲಿ ಅರಳಿಕಟ್ಟಿ, ಚೌ ಬಜಾರ, ಗಚ್ಚಿನಕಟ್ಟಿ, ಕಂಠಿಪೇಟೆ, ಸರಾಫ್ ಬಜಾರ ಮೂಲಕ ಹಾಯ್ದು ಪುರಸಭೆ ಎದುರು ಸಮಾವೇಶಗೊಂಡರು. ಪುರಸಭೆ ಮ್ಯಾನೇಜರ ರಮೇಶ ಪದಕಿ ಮತದಾರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ವಿಕಲಚೇತನರ ಮುಖಂಡ ಹುಚ್ಚೇಶ ಯಂಡಿಗೇರಿ, ಎಂ.ಆರ್.ಡಬ್ಲೂ ಮಹಾಂತೇಶ ಪಾಟೀಲ, ಯುಆರ್‍ಡಬ್ಲೂ ಹುಚ್ಚಮ್ಮ ಭಂಗಿ, ಸಿದ್ದಾರೂಢ ಕೊಪ್ಪದ, ಪರಶುರಾಮ ಕಲಾಲ, ಮಾರ್ಕಂಡೇಯ ಪಲಮಾರಿ, ಭದ್ರಪ್ಪ ಬಸರಕೋಡ, ಗದಿಗೆಪ್ಪ ನಿಲೂಗಲ್ಲ, ವಿಜಯ ಅಲದಿ, ಮಹ್ಮದಹುಸೇನ ದೋಟೆಗಾರ, ಬಾಬು ತಟಗಾರ, ಶಾರದಾ ಮಡಿವಾಳರ, ಹನಮಂತ ಭಜಂತ್ರಿ, ವಿಆರ್‍ಡಬ್ಲೂಗಳಾದ ಬೀರಪ್ಪ ಕುರಿ, ಯಮನಪ್ಪ ಕಂಬಾರ, ಮಂಜುಳಾ ಹಡಪದ, ಮಂಜುನಾಥ ಕಮತರ, ಶಾಂತಾ ಬಡಿಗೇರ, ಕೋನಮ್ಮ ಜಮ್ಮನಕಟ್ಟಿ ಮತ್ತಿತರರಿದ್ದರು.
+