ವಿಕಲಚೇತನರಲ್ಲಿ ಜೀವನೋತ್ಸಾಹವನ್ನು ಬೆಳಸಲು ಕೈ ಜೋಡಿಸಬೇಕಿದೆ.

 ಚಿತ್ರದುರ್ಗ. ಡಿ.೪;ವಿಕಲಚೇತನರನ್ನು ಸಾಮಾನ್ಯರಂತೆ ಒಪ್ಪಿಕೊಳ್ಳುವುದು, ಸಹಾನುಭೂತಿ ತೋರುವುದು, ಬೆಂಬಲಿಸುವುದು, ಎಲ್ಲರಲ್ಲೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಮಕ್ಕಳು ಅಂಗವಿಕಲತೆ ಇದ್ದಾಗ ಧೈರ್ಯವಾಗಿ ಅದನ್ನ ಮುಖ್ಯಶಿಕ್ಷಕರಿಗೆ ಹೇಳಿಕೊಳ್ಳಬೇಕು, ಮುಜುಗರಪಟ್ಟುಕೊಳ್ಳಬಾರದು, ಮುಂದೆ ಅವರಿಗೆ ವೈದ್ಯಕೀಯ ನೆರವನ್ನು ನೀಡಲು ಅನುಕೂಲಕರವಾಗುವುದು ಎಂದು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಧನಲಕ್ಷ್ಮಿ ತಿಳಿಸಿದರು.ಅವರು ನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಚನ್ನಕೇಶವಪುರದಲ್ಲಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದ “ಅಂತಾರಾಷ್ಟಿçÃಯ ವಿಕಲಚೇತನ ದಿನ” ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಜನರು ನಮ್ಮನ್ನ ಕೀಳರಿಮೆಯಿಂದ ನೋಡುತ್ತಾರೆ ಎಂಬ ಭಾವನೆಯನ್ನು ತೊರೆಯಬೇಕು, ಸರ್ಕಾರ ಅಂಗವಿಕಲ ಮಕ್ಕಳಿಗೆ ಉಚಿತವಾಗಿ ಶಸ್ತç ಚಿಕಿತ್ಸೆಗಳನ್ನು ಮಾಡಿಕೊಡುವಂತಹ ಅನುಕೂಲ ಮಾಡಿಕೊಟ್ಟಿದೆ, ವಿಕಲಚೇತನ ಮಕ್ಕಳು ಶಾಲೆಗೆ ಬರಲಾಗದಂಥ ಸಂದರ್ಭದಲ್ಲಿ, ಅವರಿಗೆ ವಿಶೇಷವಾದ ಶಿಕ್ಷಕರ ನೇಮಕ ಮಾಡಲಾಗುವುದು. ಅವರ ಮನೆಗೆ ಹೋಗಿ ಅವರಿಗೆ ಶಿಕ್ಷಣ ನೀಡುವಂಥ ವ್ಯವಸ್ಥೆ ಇದೆ ಹಾಗೂ ಇಂತ ಮಕ್ಕಳನ್ನ ಸಾಕಲಾರದ ತಂದೆತಾಯಿಗಳಿಗೆ ಸಹ ಉಚಿತ ರೇಶನ್ ನೀಡಿ, ಅವರಿಗೆ ಪೌಷ್ಟಿಕಾಂಶಗಳ ಕೊರತೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ವಿಕಲಚೇತನ ಮಕ್ಕಳ ಪೋಷಕರು, ತಿಳುವಳಿಕೆ ಹೊಂದಿ ಅವುಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದರು. ಮಕ್ಕಳು ವಿಕಲಚೇತನ ಸಹಪಾಠಿಗಳಿಗೆ ಸಹಾಯ ಮಾಡಬೇಕು, ರಸ್ತೆ ದಾಟುವಾಗ ಅವರಿಗೆ ಮಾರ್ಗದರ್ಶನ ನೀಡಬೇಕು, ಮಕ್ಕಳಿದ್ದಾಗಲೇ ನೀವು ಇನ್ನೊಬ್ಬರ ಸೇವೆಯನ್ನು ಅರಿತಿರಬೇಕು ಎಂದರು.ಸ.ಶಿ. ಮಂಜುಳಾ ಮಾತನಾಡಿ ವಿಕಲ ಚೇತನ ಮಕ್ಕಳನನ್ನ ನಾವು ಪ್ರೀತಿ ವಿಶ್ವಾಸದಿಂದ ನೋಡಿಕೊಳ್ಳಬೇಕು, ಅವರಲ್ಲಿ ಆತ್ಮಸ್ಥೆöÊರ್ಯವನ್ನು ತುಂಬಿ, ಬದುಕಿನಲ್ಲಿ ಕಷ್ಟಗಳನ್ನ ಎದುರಿಸುವಂತಹ ಮಾರ್ಗಗಳನ್ನು ಸೂಚಿಸಬೇಕು ಶಾಲೆಗೆ ಬರುವ ಯಾವುದೇ ವಿಕಲಚೇತನ ಮಕ್ಕಳನ್ನು ನಾವು ಎದೆಗುಂದುವAತೆ ಮಾಡಬಾರದು, ಅವರಿಗೆ ಆತ್ಮವಿಶ್ವಾಸ ತುಂಬಿ ಪ್ರೀತಿಯಿಂದ ಮಾತನಾಡಿಸಬೇಕು ಎಂದರು.ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ ಮಾತನಾಡಿ ವಿಕಲತೆ ಕೊರತೆಯಲ್ಲ ಅದು ಸ್ಪೂರ್ತಿ ಅಂದುಕೊಳ್ಳಬೇಕು, ತಮ್ಮದಲ್ಲದ ತಪ್ಪಿಗೆ ಅವರು ಬದುಕಿನುದ್ದಕ್ಕೂ ನೋವು, ಸಂಕಟ, ಹತಾಶೆ ಅನುಭವಿಸುತ್ತಿರುತ್ತಾರೆ. ಎಲ್ಲರಂತೆ ನಾವು ಬದುಕು ಸಾಗಿಸಲು ಆಗುತ್ತಿಲ್ಲವಲ್ಲ ಎಂಬ ನೋವಿನಲ್ಲಿ ದಿನ ಕಳೆಯುತ್ತಾರೆ. ಆ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ನಿತ್ಯ ಕೊರಗುವ ಜನರಲ್ಲಿ ಆತ್ಮಸ್ಥೆöÊರ್ಯ ತುಂಬಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಮಕ್ಕಳು ವಿಕಲಚೇತನರಿಗೆ ಧೈರ್ಯ ತುಂಬುವAತಹ ಘೋಷಣೆಗಳನ್ನು ಕೂಗಿದರು, ಭಿತ್ತಿಪತ್ರಗಳನ್ನು ಶಾಲೆಯ ಸುತ್ತಮುತ್ತ ಅಂಟಿಸಿ. ಜಾಗೃತಿ ಮೂಡಿಸಿದರು.ಕಾರ್ಯಕ್ರಮದಲ್ಲಿ ಸ.ಶಿ ಮಂಜಮ್ಮ, ವೆಂಕಟೇಶ್ವರ ಬಿ.ಎಡ್. ಕಾಲೇಜಿನ ಪ್ರಶಿಕ್ಷಣಾರ್ಥಿಗಳಾದ ಜ್ಯೋತಿ ಹೆಬ್ಬಾರೆ, ನೇತ್ರಾವತಿ, ಪುಷ್ಪಾವತಿ, ನಿರ್ಮಲ, ಶ್ವೇತಾ ಬಿ. ಜೆ. ಹಾಜರಿದ್ದರು.