ವಿಕರವೇ ವತಿಯಿಂದ ನೀರಿನ ಬಾಟಲ್ ವಿತರಣೆ

ಸಂಜೆವಾಣಿ ವಾರ್ತೆ

ದಾವಣಗೆರೆ,ಫೆ.೧೫;  ಶ್ರೀ ಸಂತ ಸೇವಾಲಾಲ್ ಮಹಾರಾಜರವರ ಜಯಂತ್ಯ್ಯೋತ್ಸವಕ್ಕೆ ವಿವಿಧ ಸ್ಥಳಗಳಿಂದ ಭಕ್ತಾದಿಗಳು ಪಾದಯಾತ್ರೆಯ ಮೂಲಕ ಆಗಮಿಸಿ, ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ  ಶ್ರೀ ಸಂತ ಸೇವಾಲಾಲ್ ಮಹಾರಾಜರವರ 285ನೇ ಜಯಂತೋತ್ಸವಕ್ಕೆ ಹೊನ್ನಾಳಿಯ ಹತ್ತಿರ ಇರುವ ಸೂರಗೊಂಡನಕೊಪ್ಪಕ್ಕೆ ಬರುವ ಸೇವಾಲಾಲ್ ಮಾಲಾಧಾರಿಗಳು ಹಾಗೂ ಭಕ್ತಾದಿಗಳಿಗೆ ಸುಮಾರು 1000 ಕ್ಕೂ ಹೆಚ್ಚು ಬಿಸ್ಲೇರಿ ನೀರಿನ ಬಾಟಲ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.ಈ ಸಂದರ್ಭದಲ್ಲಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಬಿ. ಈ.ದಯಾನಂದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್ ದೊಡ್ಮನಿ, ಜಿಲ್ಲಾ ಸಂಚಾಲಕ ಮಂಜುನಾಥ್ ಬಿ ವಿ ಹಾಗೂ ದಾವಣಗೆರೆ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ಅಧ್ಯಕ್ಷ ಎಂ.ಮನು ಚಂದ್ರ ಮೌಳಿ , ಕುಮಾರ್ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.