ವಿಎಸ್ ಕೆ ವಿವಿ ಹೊರಗುತ್ತಿಗೆ ನೌಕರರ ಬಾಕಿ ವೇತನ ಬಿಡುಗಡೆಗೆ ಮನವಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಡಿ.09: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕಾರ್ಯ  ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೌಕರರಿಗೆ ಬಾಕಿ ವೇತನ ನೀಡಲು ಹಂಗಾಮಿ ಕುಲಪತಿಯಾಗಿ ನೇಮಕಗೊಂಡಿರುವ  ಪ್ರೊ.ಅನಂತ್ ಎಲ್ ಝಂಡೇಕರ್ ಅವರನ್ನು ವಿವಿಯವಿದ್ಯಾ ವಿಷಯಕ ಪರಿಷತ್ ನ‌ ಮಾಜಿ  ಸದಸ್ಯ ವೆಂಕಟೇಶ್ ಹೆಗಡೆ ಮನವಿ ಮಾಡಿದ್ದಾರೆ.
ಅವರು ನಿನ್ನೆ ಹಂಗಾಮಿ ಕುಲಪತಿಗಳನ್ನು ಭೇಟಿ ಮಾಡಿ.  ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕೆಂದು ಕೋರಿದ್ದಾರೆ.
ಈ ಸಂದರ್ಭದಲ್ಲಿ    ವಿ.ವಿಯ  ಬೋಧಕರಾದ ಪ್ರೊ. ಗೌರಿ ಮಾನಸ,  ಮೋಹನ್ ದಾಸ್,  ಸ್ನೇಹ ಸುಮ ಹೆಗಡೆ, ದೀಪಕ್, ರಾಜ ಮುಂತಾದವರು ಉಪಸ್ಥಿತರಿದ್ದರು