ವಿಆರ್ ಎಲ್ ಲಾರಿಗೆ ಬೆಂಕಿ – ಹೊತ್ತಿ ಉರಿದ ಸಾಮಾನುಗಳು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು 30 :- ಹೊಸಪೇಟೆ ಕಡೆಯಿಂದ ಬೆಂಗಳೂರು ಕಡೆಗೆ ಹೊರಟಿದ್ದ ವಿವಿಧ ಸಾಮಾನುಗಳನ್ನು ಪಾರ್ಸೆಲ್ ಹೊತ್ತ
ವಿ ಆರ್ ಎಲ್ ಕಂಪನಿಯ ಕಂಟೇನರ್ ಲಾರಿಯ ಟಯರ್ ಗಳ ಘರ್ಷಣೆಯಿಂದ ಹತ್ತಿದ ಆಕಸ್ಮಿಕ ಬೆಂಕಿಯಿಂದ ಲಾರಿಯೋಳಗಿನ ಶೇಕಡಾ 70ರಷ್ಟು ಸಾಮಾನುಗಳು ಸುಟ್ಟುಕರಕಲಾಗಿರುವ ಘಟನೆ ತಾಲೂಕಿನ ಎಂ ಬಿ ಅಯ್ಯನಹಳ್ಳಿ ಸಮೀಪ ಇಂದು ನಸುಕಿನ ಜಾವ ಹೈವೇ 50ರ ರಸ್ತೆಯಲ್ಲಿ ಜರುಗಿದೆ.
ವಿಆರ್ ಎಲ್ ಕಂಪನಿ ಕಂಟೇನರ್ ಲಾರಿಯಲ್ಲಿ ವಿವಿಧ ರೀತಿಯಲ್ಲಿ ಜನಬಳಕೆ ಸಾಮಾನುಗಳು ಹೊತ್ತು ಬೆಂಗಳೂರು ಕಡೆಗೆ ಹೋಗುತ್ತಿರುವಾಗ ಇಂದು ನಸುಕಿನ ಜಾವ 5ಗಂಟೆ ಸುಮಾರಿಗೆ ತಾಲೂಕಿನ ಎಂ ಬಿ ಅಯ್ಯನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಚಾರದ  ಟಯರ್ ಗಳ ಘರ್ಷಣೆಯಲ್ಲಿ  ಆಕಸ್ಮಿಕ ಬೆಂಕಿ ತಗುಲಿ ಲಾರಿಗೆ ಆವರಿಸಿದ್ದು ಲಾರಿಯೊಳಗಿನ ಸಾಮಾನುಗಳಿಗೂ ಬೆಂಕಿ  ತಗುಲಿದ್ದು ತಕ್ಷಣ ಲಾರಿ ನಿಲ್ಲಿಸಿದ ಚಾಲಕ ರಸ್ತೆ ಪಕ್ಕಕ್ಕೆ ನಿಲ್ಲಿಸಲಾಗಿ ನಂತರ ಹೈವೇ ಪೆಟ್ರೋಲಿಂಗ್ ವಾಹನ ಹಾಗೂ ಹೊಸಹಳ್ಳಿ ಪೋಲೀಸರ ಸಹಾಯದಿಂದ ಕೂಡ್ಲಿಗಿ ಅಗ್ನಿಶಾಮಕದಳ ಘಟನಾ ಸ್ಥಳಕ್ಕೆ ಆಗಮಿಸಿ ಮೂರ್ನಾಕು ತಾಸು ಬೆಂಕಿ ಆರಿಸುವಲ್ಲಿ ಕೂಡ್ಲಿಗಿ ಅಗ್ನಿಶಾಮಕ ದಳದ ಎಸ್ ಎಂ ಪಾಷ ನೇತೃತ್ವದಲ್ಲಿ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ನಿರತರಾಗಿದ್ದರು  ಆದರೆ ಸಾಮಾನುಗಳ ಅಂದಾಜು ಬೆಲೆ ಆದರಲ್ಲಿ ಸುಟ್ಟು ಕರಕಲಾದ ಸಾಮಾನುಗಳ ಮೌಲ್ಯದ ಬಗ್ಗೆ ಮಾಹಿತಿ ತಿಳಿಯಲಿಲ್ಲವಾದರೂ ಲಾರಿಯಲ್ಲಿದ್ದ ಸಾಮಾನುಗಳು ಹಾಗೂ ಲಾರಿಯ ಕೇಳಬಿಡಿಭಾಗಗಳು ಸೇರಿದಂತೆ ಶೇ 70ರಷ್ಟು ಪ್ರಮಾಣದಲ್ಲಿ ಬೆಂಕಿಗಾಹುತಿಯಾಗಿದೆ ಎನ್ನುವುದು ಮಾತ್ರ ತಿಳಿದಿ