ವಿಂಡ್  ಪವರ್ ತೆರವುಗೊಳಿಸಲು ಮನವಿ


ಸಂಜೆವಾಣಿ ವಾರ್ತೆ
ಕೊಪ್ಪಳ, ಜು.19: ಕರ್ನಾಟಕ ಹಿತ ರಕ್ಷಣಾ ವೇದಿಕೆ ಕುಕನೂರು ತಾಲೂಕು ಘಟಕ  ವತಿಯಿಂದ  ತಾಲೂಕಿನಲ್ಲಡೆ  ಅನಧಿಕೃತವಾಗಿ ತೆಲೆ ಎತ್ತಿರುವ ವಿಂಡ ಪವರ್ ಪ್ಯಾನ್ ತೆರವು ಗೊಳಿಸುವಂತೆ ಕುಕನೂರು  ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ದಲ್ಲಿ ರಾಜ್ಯ ಗೌರವಾಧ್ಯಕ್ಷ ರಾಮಣ್ಣ ಭಜಂತ್ರಿ,   ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷ ಅಜ್ಜಪ್ಪ ಗೌಡ ವೀರಾಪುರ,  ಜಿಲ್ಲಾಧ್ಯಕ್ಷರಾದ  ಕೃಷ್ಣ ಗೌರಾಳ, ಕುಕುನೂರು ತಾಲೂಕ ಅಧ್ಯಕ್ಷ   ಶ್ರೀಕಾಂತ್ ಚಲವಾದಿ, ಕುಕುನೂರ್ ನಗರ ಘಟಕ ಅಧ್ಯಕ್ಷ  ಶಿವಣ್ಣ ಆದಿ, ತಾಲೂಕು ಉಪಾಧ್ಯಕ್ಷ ಶರಣಪ್ಪ ವಾಯ್ ತೊಂಡಿಹಾಳ,  ಹಾಗೂ ಇನ್ನುಳಿದ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.