ವಿಂಡೀಸ್ ವಿರುದ್ಧ ಏಕದಿನ ಸರಣಿ ಇತಿಹಾಸ ನಿರ್ಮಿಸಿದ ಭಾರತ

ಪೋರ್ಟ್‌ಆಫ್‌ಸ್ಪೇನ್,ಜು.೨೮- ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ ೩-೦ ಯಿಂದ ಕ್ಲೀನ್‌ಸ್ವಿಪ್ ಮಾಡಿದೆ. ನಿನ್ನೆ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಮಳೆಯಿಂದಾಗಿ ಡಕ್ವಥ್ ರುಯಿಸ್ ನಿಯಮದ ಪ್ರಕಾರ ೧೧೯
ರನ್‌ಗಳಿಂದ ಭಾರತ ಭರ್ಜರಿ ಜಯ ದಾಖಲಿಸಿತು.
ಮಳೆಯಿಂದಾಗಿ ಪಂದ್ಯವನ್ನು ೩೬ ಓವರ್‌ಗಳಿಗೆ ಸೀಮಿತಗೊಳಿಸಲಾಯಿತು. ಡಕ್ವಥ್ ರುಯಿಸ್ ನಿಯಮದ ಪ್ರಕಾರ ವೆಸ್ಟ್‌ಇಂಡೀಸ್‌ಗೆ ಗೆಲ್ಲಲು ೩೫ ಓವರ್‌ಗಳಲ್ಲಿ ೨೫೫ ರನ್‌ಗಳ ಗುರಿ ನೀಡಲಾಯಿತು.
ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ವೆಸ್ಟ್‌ಇಂಡೀಸ್ ಕೇವಲ ೧೩೭ ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ಶರಣಾಯಿತು.
ವಿಕೊಲೋಸ್ ಪೂರನ್ ೪೨, ಬ್ರಾಂಡನ್‌ಕಿಂಗ್ ೪೨ ಹಾಗೂ ಶಾಯ್‌ಹೋಪ್ ೨೨ ರನ್‌ಗಳಿಸಿದ್ದನ್ನೊರತುಪಡಿಸಿ ಉಳಿದ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾಗಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.
ಭಾರತದ ಪರ ಯಜುವೇಂದ್ರ ಚಾಹಲ್ ೪, ಶಾರ್ದೂಲ್‌ಠಾಕೂರ್, ಮೊಹಮದ್ ಶಿರಾಜ್ ೨ ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ಅಕ್ಷರ್‌ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ಶುಭ್‌ಮನ್‌ಗಿಲ್ ಹಾಗೂ ಶಿಖರ್‌ಧವನ್ ಬಿರುಸಿನ ಬ್ಯಾಟಿಂಗ್ ನೆರವಿನಿಂದ ೩ ವಿಕೆಟ್ ನಷ್ಟಕ್ಕೆ ೨೨೫ ರನ್ ಗಳಿಸಿತು. ಗಿಲ್ ೯೮, ಶಿಖರ್‌ಧವನ್ ೫೮, ಶ್ರೇಯಸ್ ಅಯ್ಯರ್ ೪೪ ರನ್ ಗಳಿಸಿದರು.
ಇತಿಹಾಸ ನಿರ್ಮಿಸಿದ ಭಾರತ
ಕೆರೇಬಿಯನ್ ನಾಡಿನಲ್ಲಿ ಭಾರತ ೩೯ ವರ್ಷಗಳ ಬಳಿಕ ಏಕದಿನ ಸರಣಿ ಕ್ಲೀನ್‌ಸ್ವಿಪ್ ಮಾಡಿದೆ. ೧೯೮೩ರಲ್ಲಿ ಭಾರತ ಮೊದಲ ಬಾರಿಗೆ ವೆಸ್ಟ್‌ಇಂಡೀಸ್ ನೆಲದಲ್ಲಿ ಏಕದಿನ ಸರಣಿ ಆಡಿತ್ತು. ಅಂದಿನಿಂದ ಇದುವರೆಗೆ ಕ್ಲೀನ್‌ಸ್ವಿಪ್ ಸಾಧನೆ ಮಾಡಿರಲಿಲ್ಲ. ಈಗ ೩-೦ ಅಂತರದಿಂದ ಸರಣಿ ಕೈವಶ ಮಾಡಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದೆ.
ಈ ಸಾಧನೆ ಮಾಡಿದ ಭಾರತದ ಮೊದಲ ನಾಯಕನೆಂಬ ಕೀರ್ತಿಗೆ ಶಿಖರ್‌ಧವನ್ ಪಾತ್ರರಾಗಿದ್ದಾರೆ.