ವಿಂಡೀಸ್ ವಿರುದ್ದ ಟಿ-20 ಸರಣಿಗೆ ಭಾರತ‌‌ ತಂಡ ಪ್ರಕಟ: ಕೆ.ಎಲ್.ರಾಹುಲ್, ಅಶ್ವಿನ್ ವಾಪಸ್

ಮುಂಬೈ, ಜು.14- ವೆಸ್ಟ್ ಇಂಡೀಸ್ ವಿರುದ್ಧದ ಟಿ.20 ಸರಣಿಗೆ ರೋಹಿತ್ ಶರ್ಮಾ ಸಾರಥ್ಯದಲ್ಲಿ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ಗಾಯಾಳುವಾಗಿದ್ದ ಕೆ.ಎಲ್. ರಾಹುಲ್ ಮತ್ತು ಆರ್.ಅಶ್ವಿನ್ ತಂಡಕ್ಕೆ ವಾಪಸ್ಸಾಗಿದ್ದಾರೆ. ಕುಲ್ ದೀಪ್ ಯಾದವ್ ಅವರು ಸ್ಥಾನಗಿಟ್ಟಿಸಿದ್ದಾರೆ.
ಇದೇ ವೇಳೆ ವೇಳೆ ವಿರಾಟ್ ಕೊಹ್ಲಿ, ವೇಗದ ಬೌಲರ್ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ರೋಹಿತ್​ ಶರ್ಮಾ ನಾಯಕತ್ವದ 18 ಸದಸ್ಯರ ತಂಡ ಪ್ರಕಟಿಸಲಾಗಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದ ಕೆಎಲ್​ ರಾಹುಲ್​ ತಂಡಕ್ಕೆ ಮರಳಿದ್ದಾರೆ. ಇದರ ಬೆನ್ನಲ್ಲೇ ಅವಕಾಶ ವಂಚಿತರಾಗಿದ್ದ ಆರ್​​.ಅಶ್ವಿನ್​​ಗೂ ಅವಕಾಶ ನೀಡಲಾಗಿದೆ. ಹಾಕಲಾಗಿದೆ.
ಏಕದಿನ ಹಾಗೂ ಟಿ -20 ಸರಣಿಯಿಂದ ಬೂಮ್ರಾ ಹಾಗೂ ಕೊಹ್ಲಿ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.
ವೆಸ್ಟ್ ಇಂಡೀಸ್​ ವಿರುದ್ಧದ ಏಕದಿನ ಸರಣಿಯಿಂದ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲಾಗಿದೆ. ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್​ ಹಾಗೂ ಜಸ್ಪ್ರೀತ್ ಬುಮ್ರಾಗೂ ವಿಶ್ರಾಂತಿ ನೀಡಲಾಗಿದೆ. ಇದರ ಜೊತೆಗೆ ಭುವನೇಶ್ವರ್ ಕುಮಾರ್​, ಹರ್ಷಲ್ ಪಟೇಲ್​​ಗೂ ಮಣೆ ಹಾಕಿಲ್ಲ. ಹೀಗಾಗಿ, ತಂಡವನ್ನ ಶಿಖರ್ ಧವನ್ ಮುನ್ನಡೆಸಲಿದ್ದಾರೆ

ಟಿ-20 ತಂಡ ಇಂತಿದೆ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್​, ಕೆಎಲ್ ರಾಹುಲ್​, ಸೂರ್ಯಕುಮಾರ್ ಯಾದವ್​, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್​, ದಿನೇಶ್ ಕಾರ್ತಿಕ್​, ರಿಷಭ್​ ಪಂತ್​(ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್​, ಆರ್​.ಅಶ್ವಿನ್​, ರವಿ ಬಿಷ್ಣೋಯ್​, ಕುಲ್ದೀಪ್ ಯಾದವ್​, ಭುವನೇಶ್ವರ್ ಕುಮಾರ್​, ಆವೇಶ್ ಖಾನ್​, ಹರ್ಷಲ್ ಪಟೇಲ್​​,ಅರ್ಷದೀಪ್ ಸಿಂಗ್​

ಏಕದಿನ ತಂಡ : ಶಿಖರ್ ಧವನ್​(ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್​, ಶುಬ್ಮನ್ ಗಿಲ್​, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್​, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್(ವಿ.ಕೀ), ಸಂಜು ಸ್ಯಾಮ್ಸನ್​(ವಿ.ಕೀ), ರವೀಂದ್ರ ಜಡೇಜಾ(ಉಪನಾಯಕ), ಶಾರ್ದೂಲ್ ಠಾಕೂರ್. ಯಜುವೇಂದ್ರ ಚಹಲ್​​, ಅಕ್ಸರ್ ಪಟೇಲ್​, ಆವೇಶ್ ಖಾನ್​, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್​, ಅರ್ಷದೀಪ್ ಸಿಂಗ್