ವಿಂಗ್ಸ್ ಫ್ಯಾಷನ್ ಇವೆಂಟ್ಸ್ ಸ್ಪರ್ಧಾ ವಿಜೇತರು

ತುಮಕೂರು, ನ. ೧೩- ವಿಂಗ್ಸ್ ಫ್ಯಾಷನ್ ಇವೆಂಟ್ಸ್ ವತಿಯಿಂದ ನಗರದಲ್ಲಿ ಅಕ್ಟೋಬರ್ ತಿಂಗಳಲ್ಲಿ ನಡೆಸಿದ ರಾಜ್ಯ ಮಟ್ಟದ ಫ್ಯಾಷನ್ ಸ್ಪರ್ಧೆಯಲ್ಲಿ ಮಿಸ್ಟರ್ ವಿಭಾಗದಲ್ಲಿ ಸಮೃದ್ದ, ಮಿಸ್ ವಿಭಾಗದಲ್ಲಿ ಪ್ರಜ್ಞಾತ, ಕಿಡ್ಸ್ ವಿಭಾಗದಲ್ಲಿ ಸಂಸ್ಕೃತಿ, ವಿಲಾಸ್, ಋಷಿಪ್ರವರ್ಧನ್, ಟೀನ್ ವಿಭಾಗದಲ್ಲಿ ತನುಶ್ರೀ, ಮಿಸಸ್ ವಿಭಾಗದಲ್ಲಿ ಕುಮುದ ಅವರುಗಳು ಮೊದಲ ಬಹುಮಾನ ಪಡೆದುಕೊಂಡಿದ್ದಾರೆ ಎಂದು ವಿಂಗ್ಸ್ ಫ್ಯಾಷನ್ ಇವೆಂಟ್ಸ್‌ನ ಸಹ ಆಯೋಜಕರಾದ ಮಾಡಲ್ ಆರುಂಧತಿ ತಿಳಿಸಿದ್ದಾರೆ.
ಕಿರುತೆರೆ ನಟಿ ಅಕ್ಷತಾ ಮತ್ತು ಮಾಡಲ್ ವಿಲಾಸ್ ಅವರು ತೀರ್ಪಗಾರರಾಗಿ ಭಾಗವಹಿಸಿದ್ದ ಈ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸುಮಾರು ೮೦ ಜನರು ಭಾಗವಹಿಸಿದ್ದು, ಗ್ರಾಮೀಣ ಪ್ರತಿಭೆಗಳು ಫ್ಯಾಸನ್ ಕ್ಷೇತ್ರದಲ್ಲಿ ಅವಕಾಶ ಪಡೆಯಲು ಉತ್ತಮ ವೇದಿಕೆ ಇದಾಗಿದೆ ಎಂದರು.
ಕೊರೊನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಫ್ಯಾಷನ್ ಕ್ಷೇತ್ರದಲ್ಲಿ ಅಂತಹ ಕಾರ್ಯಕ್ರಮಗಳು ಜರುಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಸೆಪ್ಟಂಬರ್‌ನಲ್ಲಿ ತುಮಕೂರು ಜಿಲ್ಲೆ ಸೇರಿದಂತೆ ಗ್ರಾಮೀಣ ಭಾಗದ ಯುವ ಜನರನ್ನು ಕೇಂದ್ರವಾಗಿಟ್ಟುಕೊಂಡು ರಾಜ್ಯ ಮಟ್ಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ನಮ್ಮ ಕಾರ್ಯಕ್ರಮದ ಯಶಸ್ಸಿನ ನಂತರ ಇಂತಹದ್ದೇ ಮೂರು ರಾಜ್ಯ ಮಟ್ಟದ ಸ್ಪರ್ಧೆಗಳು ತುಮಕೂರಿನಲ್ಲಿ ಬೇರೆ ಬೇರೆ ಫ್ಯಾಷನ್ ಸಂಸ್ಥೆಗಳಿಂದ ನಡೆಯುತ್ತಿರುವುದು ನಮ್ಮಗೆ ಹೆಮ್ಮೆ ತಂದಿದೆ ಎಂದರು.
ನಮ್ಮದೇ ಸಂಸ್ಥೆಯಿಂದ ರಾಜ್ಯ ಮಟ್ಟದ ವಿಂಗ್ಸ್ ಫ್ಯಾಷನ್ ಇವೆಂಟ್ಸ್-ಸೀಜ್ಹನ್-೦೨ನ್ನು ಆಯೋಜಿಸಲಾಗುತ್ತಿದ್ದು, ಮುಂದಿನ ಡಿಸೆಂಬರ್ ಅಂತ್ಯಕ್ಕೆ ಇಲ್ಲವೇ, ೨೦೨೨ರ ಜನವರಿ ಮೊದಲ ವಾರದಲ್ಲಿ ತುಮಕೂರಿನಲ್ಲಿಯೇ ಆಯೋಜಿಸಲಾಗುವುದು ಎಂದರು.
ವಿಂಗ್ಸ್ ಫ್ಯಾಷನ್ ಇವೆಂಟ್ಸ್, ಸೀಜನ್ ೧ ರ ಸ್ಪರ್ಧೆಯಲ್ಲಿ ಮಿಸ್ಟರ್ ವಿಭಾಗದಲ್ಲಿ ಮೊದಲ ಬಹುಮಾನ ಸಮೃದ್ಧ, ಎರಡನೇ ಬಹುಮಾನವನ್ನು ಅರುಣ್, ಮಿಸ್ ವಿಭಾಗದಲ್ಲಿ ಪ್ರಜ್ಞಾತ ಮೊದಲು ಬಹುಮಾನ, ಬಿಂದು ಮತ್ತು ಕುಸುಮ ಎರಡನೇ ಬಹುಮಾನ ಹಂಚಿಕೊಂಡರು. ಕಿಡ್ಸ್ ವಿಭಾಗದ ಬಾಲಕಿಯರ ವಿಭಾಗದಲ್ಲಿ ಸಂಸ್ಕೃತಿ, ಬಾಲಕರ ವಿಭಾಗದಲ್ಲಿ ವಿಲಾಸ್ ಮೊದಲ ಬಹುಮಾನ ಪಡೆದರೆ, ಋಷಿ ಪ್ರವರ್ಧನ್ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
ಟೀನ್ ವಿಭಾಗದ ಬಾಲಕಿಯರ ವಿಭಾಗದಲ್ಲಿ ತನುಶ್ರೀ, ಬಾಲಕರ ವಿಭಾಗದಲ್ಲಿ ಸಚ್ಚಿನ್ ಪ್ರಥಮ ಸ್ಥಾನ ಪಡೆದರೆ, ಗೃಹಿಣಿಯರ ಮಿಸಸ್ ವಿಭಾಗದಲ್ಲಿ ಕುಮುದ ಮತ್ತು ಸುನೀತ ಮೊದಲ ಎರಡು ಸ್ಥಾನಗಳನ್ನು ಪಡೆದಿದ್ದಾರೆ. ದೊಡ್ಡ ದೊಡ್ಡ ನಗರಗಳಿಗೆ ಸಿಮೀತವಾಗಿದ್ದ ರಾಜ್ಯ ಮಟ್ಟದ ಫ್ಯಾಷನ್ ಶೋಗಳನ್ನು ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಯುವಜನತೆಗೆ ಉತ್ತಮ ವೇದಿಕೆಯನ್ನು ವಿಂಗ್ಸ್ ಫ್ಯಾಷನ್ ಇವೆಂಟ್ಸ್ ಸಂಸ್ಥೆ ಒದಗಿಸಿದೆ ಎಂದರು.
ಈ ಸಂದರ್ಭದಲ್ಲಿ ದೇಹ ದಾಢ್ಯಪಟು ಅರ್ಜುನ್ ಪಾಳ್ಳೇಗಾರ ಮತ್ತಿತರರು ಉಪಸ್ಥಿತರಿದ್ದರು