ವಾಹನ ಸೌಲಭ್ಯಕ್ಕೆ ಚಾಲನೆ


ಕುಂದಗೋಳ,ಜ.16: ಕುಂದಗೋಳ ಮತಕ್ಷೇತ್ರದ ವಿವಿಧ ಗ್ರಾಮಗಳ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿಯವರು ನಾ ನಾಯಕಿ ಮಹಿಳಾ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಶಾಸಕರಾದ ಕುಸುಮಾವತಿ ಚ. ಶಿವಳ್ಳಿಯವರು ವಾಹನ ಸೌಲಭ್ಯಕ್ಕೆ ಚಾಲನೆಯನ್ನು ನೀಡಿದರು.
ನಮ್ಮ ದೇಶದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆಗೈಯಬೇಕು. ಈ ದಿಶೆಯಲ್ಲಿ ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾಲು ಸಮಾನವಾಗಿರಬೇಕು. ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಹುದು ಎಂಬ ನಿಲುವನ್ನು ಇಟ್ಟುಕೊಂಡು ಸಮಸ್ತ ಮಹಿಳೆಯರು ಕಾಂಗ್ರೆಸ್ ಪಕ್ಷಕ್ಕೆ ಕೈ ಜೋಡಿಸಿ, ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮೂಲಕ ರಾಜ್ಯದಲ್ಲಿ ಬದಲಾವಣೆಯ ಹೊಸ ಪರ್ವವನ್ನು ರೂಪಿಸೋಣ ಎಂದು ಅವರು ಕರೆ ನೀಡಿದರು.