ವಾಹನ ತಪಾಸಣೆ ನೆಪದಲ್ಲಿ ಯುವಕನಿಗೆ ಥಳಿಸಿದ ಪೆÇಲೀಸರು : ವಿಡಿಯೋ ವೈರಲ್

ಮೈಸೂರು, ನ.12: ವಾಹನ ತಪಾಸಣೆಯ ನೆಪದಲ್ಲಿ ಪೆÇಲೀಸರು ಯುವಕನೋರ್ವನಿಗೆ ರಕ್ತ ಬರುವಂತೆ ಥಳಿಸಿದ ಘಟನೆ ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ಹೆಬ್ಬಾಳು ಇನ್ಫೋಸಿಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಹೆಬ್ಬಾಳು ಠಾಣೆಯ ಪೆÇಲೀಸರು ವಾಹನದಲ್ಲಿ ಸಾಗುತ್ತಿದ್ದ ಯೂವಕನೋರ್ವನ ತಲೆಯ ಹಿಂಬದಿ ಭಾಗಕ್ಕೆ ಥಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಯುವಕ ನಾನು ಚಾಲನಾ ಪರವಾನಗಿ ತೋರಿಸಿಲ್ಲವಾ? ಇನ್ಶುರೆನ್ಸ್ ಇಲ್ಲವಾ? ಡ್ರಂಕ್ ಆಂಡ್ ಡ್ರೈವ್ ಮಾಡಿದ್ದೀನಾ, ಮತ್ಯಾಕೆ ನನಗೆ ರಕ್ತ ಬರೋ ತರ ಹೊಡೆದಿದ್ದೀರಿ ಎಂದು ಕೇಳಿದ್ದು, ಪೆÇಲೀಸರು ಆತನನ್ನು ಪಕ್ಕಕ್ಕೆ ಕರೆದಿರುವುದು ವಿಡಿಯೋ ದಲ್ಲಿ ಕಂಡು ಬಂದಿದೆಯಲ್ಲದೆ, ಈ ಸಂಭಾಷಣೆಯೂ ಕೇಳಿ ಬಂದಿದೆ.
ನಿನ್ನೆ ಮಧ್ಯಾಹ್ನದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಸಾರ್ವಜನಿಕರು ಪೆÇಲೀಸರ ಈ ನಡೆಯನ್ನು ಖಂಡಿಸಿದ್ದಾರೆ.