ವಾಹನ ಡಿಕ್ಕಿ: ಬಾಲಕಿ ಸಾವು

ಕಲಬುರಗಿ,ಜ.25-ಗೂಡ್ಸ್ ವಾಹನ ಡಿಕ್ಕಿ ಹೊಡೆದು ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಸಂಚಾರಿ ಪೊಲೀಸ್ ಠಾಣೆ-2ರ ವ್ಯಾಪ್ತಿಯಲ್ಲಿ ಬರುವ ಫಿಲ್ಟರ್ ಬೆಡ್ ಹತ್ತಿರ ನಡೆದಿದೆ.
ಅಮೃತಾ ತಂದೆ ಮಾಪಣ್ಣಾ ಬುಳ್ಳಕರ್ (5) ಮೃತಪಟ್ಟ ಬಾಲಕಿ.
ಮನೆಯ ಪಕ್ಕದ ರಸ್ತೆಯಲ್ಲಿ ಬಹಿರ್ದೆಸೆಗೆ ಹೋಗಿ ತಾಯಿ ಜೊತೆ ಮರಳಿ ಬರುತ್ತಿದ್ದಾಗ ಬಾಲಕಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆದಲ್ಲಿಯೇ ಮೃತಪಟ್ಟಿದ್ದಾಳೆ. ಈ ಸಂಬಂಧ ಬಾಲಕಿ ತಾಯಿ ಭಾಗಮ್ಮಾ ಅವರು ಸಂಚಾರಿ ಪೊಲೀಸ್ ಠಾಣೆ-2ರಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.