ವಾಹನ ಚಾಲಕರಿಗೆ ಕೋವಿಡ್ ಲಸಿಕೆ

ಬಳ್ಳಾರಿ ಜೂ 07 : ನಗರ ಮತ್ತು ಗ್ರಾಮಾಂತರದ ಆಟೋ, ಕ್ಯಾಬ್, ಬಸ್ಸು, ಲಾರಿ, ಟೆಂಪೋ ಟ್ರ್ಯಾಕ್ಸ್, ಗೂಡ್ಸ್ ಮೊದಲಾದ ವಾಹನಗಳ ಚಾಲಕರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯ ಇಂದು ನಗರದ ಹೊಸ ಬಸ್ ನಿಲ್ದಾಣದ ಬಳಿ ನಡೆಯಿತು.
ನಗರ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ ಇದಕ್ಕೆ ಚಾಲನೆ ನೀಡಿ.‌ ವಾಹನಗಳ ಚಾಲಕರು ತಪ್ಪದೇ ಕೋವಿಡ್ ಲಸಿಕೆ ಹಾಕಿಸಬೇಕು. ಇದರಿಂದ ಪ್ರಯಾಣಿಕರಿಗೆ ಮತ್ತು ನಿಮಗೂ ಕೋವಿಡ್ ಸೋಂಕಿನಿಂದ ಸುರಕ್ಷತೆ ಇರುತ್ತದೆ ಎಂದು ಹೇಳಿದರು.
ಇಂದು 18 ವಯಸ್ಸು ಮೀರಿದ ಎಲ್ಲಾ ಚಾಲಕರಿಗೆ ಲಸಿಕೆ ಹಾಕುವ ಕಾರ್ಯ ನಡೆದಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್ ಮಂಜುನಾಥ್ , ತಹಸಿಲ್ದಾರ್ ರೆಹನ್ ಪಾಶ, ರೆಡ್ ಕ್ರಾಸ್ ಸಂಸ್ಥೆಯ ಶಕಿಬ್ ಮತ್ತು ಆರೋಗ್ಯ ಇಲಾಕೆಯ ಅಧಿಕಾರಿಗಳು
ಆಟೋ ಯೂನಿಯನ್ ನ ಮುಖಂಡರುಗಳಾದ ಹುಂಡೇಕರ್ ರಾಜೇಶ್, ಕೆ.ತಾಯಪ್ಪ ನೇತೃತ್ವದಲ್ಲಿ ಇದನ್ನು ನಡೆಸಲಾಯಿತು.