ವಾಹನ ಚಲಿಸುವಾಗ ನಿರ್ಲಕ್ಷ ಬೇಡ

ಕಾಳಗಿ.ಜು.12. ವಾಹನಗಳನ್ನು ಚಲಿಸುವಾಗ ಸಂಚಾರಿ ನಿಯಮ ಕಡ್ಡಾಯವಾಗಿ ಪಾಲಿಸಬೇಕು. ನಿರ್ಲಕ್ಷ ತೋರಿಸಿದರೆ ಅಪಾಯ ತಪ್ಪಿದಲ್ಲ. ರಸ್ತೆ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದಾಗಿದೆ ಎಂದು ಕಾಳಗಿ ಠಾಣೆಯ ಸಿಪಿಐ ವಿನಾಯಕ ಹೇಳಿದರು.

ತಾಲೂಕಿನ ಕೊಡದೂರ ಗ್ರಾಮದಲ್ಲಿ ಸ್ಥಳೀಯ ಪೆÇಲೀಸರು ಆಯೋಜಿಸಿದ್ದ ವಾಹನ ಸವಾರರ ಸುರಕ್ಷತೆ ನಮ್ಮ ಆದ್ಯತೆ “ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ” ಎನ್ನುವ ಜಾಗೃತಿ ಸಪ್ತಾಹ ಅಭಿಯಾನದಲ್ಲಿ ಅವರು ಮಾತನಾಡಿ ಸಂಚಾರಿ ನಿಯಮಗಳನ್ನು ಪಾಲಿಸಲು ಮತ್ತು ಸುರಕ್ಷತಾ ನಿಯಮಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಈ ಅಭಿಯಾನ ಕೈಗೊಳ್ಳಲಾಗಿದೆ.

ಮಧ್ಯಪಾನ ಮಾಡಿ ವಾಹನ ಚಲಾಯಿಸಿದರೆ 10 ಸಾವಿರ, ದ್ವಿಚಕ್ರ ವಾಹನದಲ್ಲಿ ಟ್ರಿಪಲ್ ರೈಡಿಂಗ್ ಮಾಡಿದಲ್ಲಿ 500, ನಾಲ್ಕು ಚಕ್ರದ ವಾಹನ ಸವಾರರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸದಿದ್ದರೆ 500 ರೂ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪಿ ಎಸ್ ಐ ಹುಲಿಯಪ್ಪ ಗೌಡಗೊಂಡ, ಪ್ರಕಾಶ ಮೇಲಕೇರಿ, ಮಲ್ಲಿಕಾರ್ಜುನ ವಾಲಿಕಾರ, ಮೋಹನ ಚಿನ್ನ, ಅಜಯ ಜಾಧವ, ಶಿವಾನಂದ ಮೋಘಾ, ಬಸವರಾಜ ಹೊಸಮನಿ ಸೇರಿದಂತೆ ಅನೇಕರಿದರು.