ವಾಹನ ಕಳ್ಳನ ಸೆರೆ 3 ಲಕ್ಷ ಮಾಲು ವಶ

ಬೆಂಗಳೂರು,ಜು.23- ಭಾರತೀನಗರ ಪೊಲೀಸರು ಕಾರ್ಯಚರಣೆ ನಡೆಸಿ ಆಟೋ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಕೆ.ಜೆ.ಹಳ್ಳಿಯ ವಿನೋಬನಗರ ನಿವಾಸಿ ಶಫಿವುಲ್ಲಾ ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 3 ಲಕ್ಷ ಬೆಲೆಬಾಳುವ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಬಾಣಸವಾಡಿಯಲ್ಲಿ ಆರೋಪಿಯು ಆಟೋ‌ ಕಳ್ಳತನ ಮಾಡಿದ್ದು ಹಿಂದೆ ಭಾರತಿ ನಗರದಲ್ಲಿ ಕೆಟಿಎಂ ಬೈಕ್ ಕಳ್ಳತನ ಮಾಡಿದ್ದ.
ಸಿಸಿಟಿವಿ ವಿಡಿಯೋ ಆಧರಿಸಿ ಪೊಲೀಸರು ಖದೀಮನನ್ನು ಬಂಧಿಸಿದ್ದಾರೆ. ಆರೋಪಿಯಿಂದ 3 ಲಕ್ಷ ಬೆಲೆಬಾಳುವ ವಾಹನಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.