ಭಾಲ್ಕಿ:ಜು.23:ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ನಗದು ಸೇರಿ 8.75 ಲಕ್ಷ ರೂ ಮೊತ್ತದ ವಾಹನಗಳನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಹೇಳಿದರು.
ಪಟ್ಟಣದ ನಗರ ಪೆÇಲೀಸ್ ಠಾಣೆಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜು.6 ಮತ್ತು 7ರ ಮಧ್ಯದಲ್ಲಿ ಟ್ರ್ಯಾಕ್ಟರ್ ಕಳವು ಆಗಿರುವ ಬಗ್ಗೆ ನಗರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕೊಳ್ಳಲಾಗಿತ್ತು.
ಪೆÇಲೀಸ್ ತಂಡವನ್ನು ರಚಿಸಿವನ್ನು ರಚಿಸಿ ಆರೋಪಿಯನ್ನು ಬಂಧಿಸಿ ಕೂಲಕುಂಶವಾಗಿ ವಿಚಾರಣೆ ನಡೆಸಿ ಆರೋಪಿ ವಿರುದ್ಧ ನಗರ ಪೆÇಲೀಸ್ ಠಾಣೆಯಲ್ಲಿ 2 ಮತ್ತು ಧನ್ನೂರು ಪೆÇಲೀಸ್ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿರುವುದು ಕಂಡು ಬಂದಿದೆ.
ಆರೋಪಿಯಿಂದ ಅಂದಾಜು 4 ಲಕ್ಷ ರೂ ಮೊತ್ತದ ಗೂಡ್ಸ್ ವಾಹನ, 2 ಲಕ್ಷ ರೂ ಮೊತ್ತದ ಟ್ರ್ಯಾಕ್ಟರ್ ಮತ್ತು ನಗದು 2.75 ಲಕ್ಷ ರೂ ಸೇರಿ ಒಟ್ಟು 8.75 ಲಕ್ಷ ರೂ ವಶ ಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣವನ್ನು ಭೇದಿಸಿದ ಪೆÇಲೀಸ್ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಪೃಥ್ವಿಕ ಶಂಕರ್, ಪಿಎಸ್‍ಐಗಳಾದ ತಿಮ್ಮಯ್ಯ, ವಿಶ್ವರಾಧ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.