ವಾಹನ ಕಳ್ಳತನ ಆರೋಪಿ ಬಂಧನ


ಧಾರವಾಡ, ಮೇ 2: ನಕಲಿ ಕೀಲಿ ಬಳಸಿ ಮೋಟಾರ ಸೈಕಲ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಿದ್ಯಾಗಿರಿ ಪೋಲಿಸರು ಬಂಧಿಸಿದ್ದಾರೆ.
ವಿದ್ಯಾಗಿರಿ ಠಾಣಾ ವ್ಯಾಪ್ತಿಯಲ್ಲಿ ಮೋಟಾರ ಸೈಕಲ್ ಕಳ್ಳತನದ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತ ಲಾಬುರಾಮ್‍ರವರು ಕಾನೂನು ಮತ್ತು ಶಾಂತಿ ಸುವ್ಯವಸ್ಥೆ ಡಿಸಿಪಿ ಕೆ.ರಾಮರಾಜನ್, ಅಫರಾಧ ಮತ್ತು ಸಂಚಾರ ಡಿಸಿಪಿ ಆರ್.ಬಿ. ಬಸರಗಿರವರ ನಿರ್ದೇಶನದಲ್ಲಿ ಧಾರವಾಡ ಎಸಿಪಿ ಜಿ. ಅನುಷಾ, ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಎಮ್.ಕೆ. ಬಸಾಪೂರ ರವರ ಮಾರ್ಗದರ್ಶನದಲ್ಲಿ ಪಿಎಸ್‍ಐಗಳಾದ ಎಸ್.ಆರ್. ತೆಗೂರ, ಸಚಿನಕುಮಾರ ದಾಸರಡ್ಡಿ ಹಾಗೂ ಸಿಬ್ಬಂದಿ ಜನರಾದ ಬಿ.ಎಮ್.ಅಂಗಡಿ ಎಎಸ್‍ಐ, ಎಮ್.ಎಫ್. ನದಾಫ, ಐ.ಪಿ ಬುರ್ಜಿ, ಆರ್.ಕೆ. ಅತ್ತಾರ, ಬಿ.ಎಮ್.ಪಠಾತ, ಎಮ್.ಜಿ.ಪಾಟೀಲ, ಎಮ್.ಸಿ.ಮಂಕಣಿ,ಎಮ್.ವಾಯ್.ಮಾದರ, ಡಿ.ಎಸ್.ಸಾಂಗ್ಲಿಕರ ಅವರ ನೆತೃತ್ವದಲ್ಲಿ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು.
ಈ ತಂಡವು ನಕಲಿ ಕೀಲಿಯನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಆರೋಪಿತನಾದ ಕೃಷ್ಣಾ @ ಕಿಟ್ಟ್ಯಾ ತಂದೆ ಜ್ಞಾನದೇವ ಮಿರಜಕರ (36) ಈತನನ್ನು ಬಂಧಿಸಿ ಬಂಧಿತನಿಂದ ಸುಮಾರು 2,50,000 ರೂ ಬೆಲೆಯ ಒಟ್ಟು 7 ಮೋಟರ ಸೈಕಲಗಳು ಹಾಗೂ 1 ಹೊಂಡಾ ಸ್ಕೂಟರನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ವಿದ್ಯಾಗಿರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.