ವಾಹನ ಅಪಘಾತ ಓರ್ವ ಸಾವು,ಪ್ರಕರಣ ದಾಖಲು

ಮಾನ್ವಿ.ಮಾ.೦೬ – ಭಾನುವಾರ ರಾಮನಾಥ ಕ್ಯಾಂಪ್ ಹತ್ತಿರ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಕಾರು ಹಾಗೂ ಬೈಕ್ ನಡುವೆ ಮುಖಮುಖಿ ಡಿಕ್ಕಿಯಾದ ಪರಿಣಾಮವಾಗಿ ಮಾನ್ವಿ ಪಟ್ಟಣದ ಬಾಬಾ ನಾಯಕ ಕಾಲೋನಿಯ ನಿವಾಸಿ ಭೀಮಣ್ಣ ( ೫೫) ಸ್ಥಳದಲ್ಲಿಯೇ ಮೃತಪಟ್ಟಿದ್ದು ಇನ್ನೋರ್ವ ವಿರೇಶ ( ೩೦ ) ಗಂಭೀರವಾಗಿ ಗಾಯವಾಗಿದ್ದು ಆಸ್ಪತ್ರೆ ದಾಖಲಾಗಿದ್ದಾನೆ ಎಂದು ತಿಳಿದು ಬಂದಿದೆ ಇದಕ್ಕೆ ಸಂಬಂಧಿಸಿದಂತೆ ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಳ್ಳಲಾಗುತ್ತಿದೆ.