
ಸಂಜೆವಾಣಿ ವಾರ್ತೆ
ಸಿರಿಗೇರಿ ಮಾ6. ಗ್ರಾಮದ ಪೋಲಿಸ್ ಠಾಣೆ ಸಿಬ್ಬಂದಿಯವರು ಟ್ರಾಕ್ಟರ್, ಆಟೋ, ಮತ್ತು ಮಿನಿ ವಾಹನಗಳಿಗೆ ಹಿಂಬಾಗದ ಬದಿಯಲ್ಲಿ, ಹಿಂದೆ ಬರುವ ವಾಹನಗಳವರಿಗೆ ಎಚ್ಚರಿಕೆ ನೀಡಲು ರೇಡಿಯಂ ಸ್ಟಿಕ್ಕರ್‍ಗಳನ್ನು ಅಂಟಿಸಲಾಯಿತು. ಇತ್ತೀಚೆಗೆ ಹಿಂಬದಿಯಿಂದ ಬರುವ ವಾಹನಗಳವರು ಮುಂದಿನ ವಾಹನಗಳಿಗೆ ಗುದ್ದಿ ಅಪಘಾತಗಳು ಸಂಭವಿಸುತ್ತಿರುವುದು ಹೆಚ್ಚಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯಿಂದ ವಾಹನಗಳ ಮಾಲಿಕರಿಗೆ, ಚಾಲಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೇಲಧಿಕಾರಿಗಳ ಮಾರ್ಗದರ್ಶನದಂತೆ ವಾಹನಗಳ ಹಿಂಬದಿಯಲ್ಲಿ ರೇಡಿಯಂ ಸ್ಟಿಕ್ಕರ್‍ಗಳನ್ನು ಅಂಟಿಸಲಾಗುತ್ತಿದೆ ಎಂದು ಸಿರಿಗೇರಿ ಪೋಲಿಸ್ ಠಾಣೆಯ ಪಿಎಸ್‍ಐ ವೆಂಕಟೇಶ್‍ನಾಯಕ ತಿಳಿಸಿದರು. ಇದೇವೇಳೆ ವಾಹನ ಮಾಲಿಕರಿಗೆ ತಮ್ಮ ತಮ್ಮ ವಾಹನಗಳ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳುವುದು, ರಸ್ತೆ ನಿಯಮ ಪಾಲಿಸುವುದು, ಹಿಂದೆ ಬರುವ ವಾಹನಗಳಿಗೆ ತಿಳಿಯುವಂತೆ ಇಂಡಿಕೇಟರ್‍ಗಳು ಮತ್ತು ದೊಡ್ಡದಾದ ಹೊಳಪಿನ ಸ್ಟಿಕರ್‍ಗಳನ್ನು ಹಚ್ಚುವುದು, ಮತ್ತು ಹೆಚ್ಚಿನ ಅಪಘಾತಗಳು ಸಂಭವಿಸದಂತೆ ರಸ್ತೆ ನಿಯಮಗಳನ್ನು ಪಾಲಿಸಬೇಕೆಂದು ತಿಳಿಸಿದರು. ಎಎಸ್‍ಐ ಎಚ್.ಗಂಗಣ್ಣ, ಸಿಬ್ಬಂದಿಯವರು ವಾಹನಗಳಿಗೆ ಸ್ಟಿಕರ್ ಹಚ್ಚುವ ಕೆಲಸದಲ್ಲಿ ಸಹಕರಿಸಿದರು.