ಕಲಬುರಗಿ,ಜು.27:ಲಾಕ್‍ಡೌನ್ ಸಂದರ್ಭದಲ್ಲಿ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ವಶಪಡಿಸಿಕೊಂಡು ಕಲಬುರಗಿಯ ಸಂಚಾರಿ ಪೊಲೀಸ್ ಠಾಣೆ-2 ರಲ್ಲಿ ಇಟ್ಟುಕೊಳ್ಳಲಾಗಿತ್ತು. ಆದರೆ ಕೆಲವು ವಾಹನಗಳ ವಾರಸುದಾರರು ತಮ್ಮ ವಾಹನಗಳನ್ನು ವಶಪಡಿಸಿಕೊಂಡ ತೆಗೆದುಕೊಂಡು ಹೋಗಿರುತ್ತಾರೆ. ಇನ್ನುಳಿದ ಆಟೋ ಹಾಗೂ ದ್ವಿಚಕ್ರ ವಾಹನಗಳು ಸೇರಿ ಒಟ್ಟು 32 ವಾಹನಗಳು ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರ ಆವರದಲ್ಲಿರುತ್ತವೆ. ಈ ವಾಹನಗಳ ವಾರಸುದಾರರ ಪತ್ತೆಗಾಗಿ ಎಂದು ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರ ಆರಕ್ಷಕ ನಿರೀಕ್ಷಕರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಸಂಬಂಧಪಟ್ಟ ಇನ್ನುಳಿದ ವಾಹನಗಳ ವಾರಸುದಾರರು ತಮ್ಮ ವಾಹನದ ಸೂಕ್ತ ದಾಖಲಾತಿಗಳನ್ನು ಹಾಜರಪಡಿಸಿದ್ದಲ್ಲಿ ವಾಹನಗಳನ್ನು ವಾರಸುದಾರರಿಗೆ ಒಪ್ಪಿಸಲಾಗುತ್ತದೆ. ವಾಹನದ ಮಾದರಿ, ವಾಹನ ಸಂಖ್ಯೆ, ಚಸ್ಸಿ, ನಂಬರ್ ಹಾಗೂ ಇಂಜಿನ್ ನಂಬರ್ ಸೇರಿದಂತೆ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಂಚಾರಿ ಪೊಲೀಸ್ ಠಾಣೆ-2ರ ಆರಕ್ಷಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.