ವಾಹನಗಳ ಬ್ಯಾಟರಿ ಕಳವು : ಮಾಲು ಸಹಿತ ವ್ಯಕ್ತಿ ಬಂಧನ

ಕೊಳ್ಳೇಗಾಲ, ನ.22: ವಾಹನಗಳ ಬ್ಯಾಟರಿಗಳನ್ನು ಕಳುವು ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಪತ್ತೆ ಹಚ್ಚಿ ಮಾಲು ಸಹಿತ ಬಂಧಿಸುವಲ್ಲಿ ಕೊಳ್ಳೇಗಾಲ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಸಾರ್‍ಅಹಮದ್ ಬಂಧಿತಆರೋಪಿ.ಪಟ್ಟಣದ ಪೊಲೀಸ್‍ಠಾಣೆಯ ಪಿಎಸ್‍ಐ ಮಾದೇಗೌಡ ನೇತೃತ್ವದಲ್ಲಿಎಎಸ್‍ಐತಾಜುದ್ದೀನ್ ಹಾಗೂ ಸಿಬ್ಬಂದಿಗಳು ತಂಡಆರೋಪಿಯನ್ನು ಬಂಧಿಸಿ ಬ್ಯಾಟರಿ ಕಳ್ಳತನಕ್ಕೆ ಬಳಸುತ್ತಿದ್ದ ಓಮಿನಿ ವಾಹನ ಹಾಗೂ ಬ್ಯಾಟರಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ.