ವಾಹನಗಳ ಬಿಡುಗಡೆಗೆ ಆಗ್ರಹಿಸಿ ಮನವಿ


ಹುಬ್ಬಳ್ಳಿ,ಜೂ.7: ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳನ್ನು ಪೆÇಲೀಸ್ ಸಿಬ್ಬಂದಿಗಳು ಸಿಜ್ ಮಾಡಿದ್ದು, ಮಾನವೀಯತೆ ದೃಷ್ಟಿಯಿಂದ ಬಿಡುಗಡೆ ಮಾಡುವಂತೆ ಆಗ್ರಹಿಸಿ ವಿದ್ಯಾನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರ ನೇತೃತ್ವದಲ್ಲಿ ಸಹಾಯಕ ಪೆÇೀಲಿಸ್ ಆಯುಕ್ತರ ಮೂಲಕ ಪೆÇೀಲಿಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.
ಪೆÇಲೀಸ್ ಸಿಬ್ಬಂದಿ ಸತತ 30-40 ದಿನಗಳಿಂದ ಅನಾವಶ್ಯಕವಾಗಿ ರಸ್ತೆಗೆ ಬಂದ ವಾಹನಗಳನ್ನು ಸೀಜ್ ಮಾಡಿದ್ದು ಶ್ಲಾಘನೀಯ, ಕೊರೊನಾ ವಿರುದ್ಧದ ಹೋರಾಟದಲ್ಲಿ ನಿಮ್ಮ ಜೊತೆಗೆ ನಮ್ಮ ಬೆಂಬಲವಿದೆ. ಆದರೆ ಕಳೆದ 6-7 ದಿನಗಳಿಂದ ಮುಂಗಾರು ಮಳೆ ಆರಂಭವಾಗಿದ್ದು ಮಳೆ ಹೊಡೆತಕ್ಕೆ ದ್ವಿಚಕ್ರ ವಾಹನಗಳು ನಿಧಾನಗತಿಯಲ್ಲಿ ಶಿಥಿಲಗೊಳ್ಳುತ್ತವೆ. ಇದರಿಂದ ಸಾರ್ವಜನಿಕರಿಗೆ ಕನಿಷ್ಠ ರೊ4000 ರಿಂದ ರೊ6000 ಸರ್ವಿಸ್ ವೆಚ್ಚವಾಗುತ್ತದೆ ( ರಿಲೀಸ್ ಆದ ನಂತರ). ಅಷ್ಟೇ ಅಲ್ಲದೆ ದ್ವಿಚಕ್ರ ವಾಹನಗಳು ಮಧ್ಯಮ ವರ್ಗದ ಬೆನ್ನೆಲುಬಾಗಿದ್ದು, ಅವರ ಅವಶ್ಯಕತೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಯುವಕರು ಉದ್ಯೋಗವಿಲ್ಲದೆ ಆದಾಯವಿಲ್ಲದೆ ಪರದಾಡುತ್ತಿದ್ದಾರೆ ಪೆÇೀಷಕರು ಸಹ ಆದಾಯವಿಲ್ಲದೆ ಕಂಗಾಲಾಗಿದ್ದಾರೆ.
ಸಾರ್ವಜನಿಕರು ಅವಶ್ಯಕತೆಯ ಸಲುವಾಗಿ ಮತ್ತು ಅನಿವಾರ್ಯ ಕಾರಣಗಳಿಂದ ರಸ್ತೆಗೆ ಇಳಿದಿರುತ್ತಾರೆ. ಇಂಥವರಲ್ಲಿ ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡುವ ಜನರು ಬಹಳ ಕಡಿಮೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ವಾಹನಗಳು ಕಾನೂನಿನ ಚೌಕಟ್ಟಿನಲ್ಲಿ ಬಿಡುಗಡೆ ಮಾಡಿ ತಾವುಗಳು ಶ್ರೀಸಾಮಾನ್ಯರ ನೆರವಿಗೆ ಬಂದು ಸಾರ್ವಜನಿಕರಿಗೆ ಅನುಕೂಲ ಮಾಡಬೇಕೆಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ವೆಂಕಟೇಶ ಮೇಸ್ತ್ರಿ, ಮಾಜಿ ಪಾಲಿಗೆ ಸದಸ್ಯರು ಸುವರ್ಣ ಕಲಕುಂಟ್ಲಾ, ಯುವ ಮುಖಂಡರು ಸುನಿಲ ಮಠಪತಿ, ಸುರೇಶ ಯಾತಗೇರಿ ಸೇರಿದಂತೆ ಮುಂತಾದವರು ಇದ್ದರು.