ವಾಹನಗಳ ಖರೀದಿಗೆ  ಹ್ಯಾಲೀಸ್‌ ಬ್ಲೂ ನಿಂದ ನೌಕರರಿಗೆ ಆರ್ಥಿಕ ನೆರವು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಹ್ಯಾಲೀಸ್‌ ಬ್ಲೂ  ಸ್ಟೀಲ್ ಕನ್ಟ್ರಕ್ಷನ್ ಕಂಪನಿಯಯ ತನ್ನ 30 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಕಂಪನಿಯಲ್ಲಿ  ಐದು ವರ್ಷಗಳ ಕಾಲ ದುಡಿದ   ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಕಾರುಗಳನ್ನು ಖರೀದಿಸಲು ಆರ್ಥಿಕ ನೆರವು ಒದಗಿಸಿದೆ.
ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ವಾಹನಗಳನ್ನು ನೌಕರರಿಗೆ ನೀಡಿರುವುದು ಪ್ರಗತಿಯ ಸೂಚಕವಾಗಿದೆ. ಇದು ಉದ್ಯೋಗ ನಿಷ್ಠೆಗೆ ಪ್ರತಿಫಲ ನೀಡುವುದಲ್ಲದೆ, ಸಮರ್ಥನೀಯತೆಯನ್ನು ಉತ್ತೇಜಿಸುತ್ತದೆ ಮತ್ತು ವೈಯಕ್ತಿಕ ಅಗತ್ಯಗಳು ಮತ್ತು ಆದ್ಯತೆಗಳಿಗೆ ಸರಿಹೊಂದುವಂತೆ ಸಾರಿಗೆ ಆಯ್ಕೆಗಳ ಶ್ರೇಣಿಯನ್ನು ನೀಡಿದಂತಾಗಿದೆ.