
ವಾಡಿ:ಆ.12: ವಾಹನ ಚಾಲಕರು ಸಂಚಾರಿ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕು ಸಂಚಾರಿ ನಿಯಮಗಳನ್ನು ಪಾಲಿಸುವದರಿಂದ ಆಗುವ ದೊಡ್ಡ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ಪಿಎಸ್‍ಐ ತಿರುಮಲೇಶ್ ಕುಂಬಾರ ಹೇಳಿದರು.
ಸಮೀಪದ ರಾವೂರ ಗ್ರಾಮದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ರೇಡಿಯಂ ಸ್ಟಿಕ್ಕರ್ ಅಂಟಿಸುವ ಮೂಲಕ ಜನರಲ್ಲಿ ಜಾಗೃತಿ ಸಪ್ತಾಹ ನಡೆಸಿ ಅವರು ಮಾತನಾಡ ಅವರು ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ಜೀವ ರಕ್ಷಣೆ ಮಾಡಿಕೊಳ್ಳಬಹುದಾಗಿದೆ. ನಿಮ್ಮನ್ನು ನಂಬಿ ಬದುಕುವ ಕುಟುಂಬಕ್ಕೆ ನ್ಯಾಯ ಮಾಡಬಾರದು ಅಡ್ಡಾದಿಡ್ಡಿಯಾಗಿ ವಾಹನ ಓಡಿಸುವುದರಿಂದ ಅಪಾಯಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ನಮ್ಮ ಕುಟುಂಬ ಸುರಕ್ಷತೆಗಾಗಿ ನಾವು ಸಂಚಾರಿ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸಬೇಕೆಂದು ವಾಹನ ಚಾಲಕರಲ್ಲಿ ಜಾಗೃತಿ ಮೂಡಿಸಿದರು.
ಅಪರಾಧ ವಿಭಾಗದ ಪಿಎಸ್‍ಐ ಶಿವಕಾಂತ ಕಮಲಾಪುರ, ಎಸ್‍ಐ ಚನಮಲ್ಲಪ್ಪ ಪಾಟೀಲ, ವಿಶೇಷ ಪೇದೆ ಲಕ್ಷ್ಮಣ ತಳಕೇರಿ, ಮುಖ್ಯ ಪೇದೆ ಶೇಖ್ ಮಹೆಬೂಬ್, ಪೇದೆಗಳಾದ ವಿಶ್ವನಾಥ ಹೂಗಾರ, ರವಿಕುಮಾರ ಆರಿ ಹಾಗೂ ವಾಹನ ಸವಾರರು ಜಾಥಾದಲ್ಲಿ ಇದ್ದರು.