ವಾಹನಗಳಿಗೆ ಪ್ರತಿ ಫಲಕಗಳ ಅಳವಡಿಕೆ

ಮುನವಳ್ಳಿ,ನ11 ಸಮಿಪದ ಹರ್ಷ ಶುಗರ್ಸ ಕಾರ್ಖಾನೆಗೆ ಕಬ್ಬು ಸಾರಿಗೆ ಮಾಡುವ ಎಲ್ಲ ವಾಹನಗಳಿಗೆ ರಸ್ತೆಯ ಮೇಲಾಗುವ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಯನ್ನು ನಿಯಂತ್ರಿಸುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ಪ್ರತಿ ಫಲಕಗಳನ್ನು ದಿ. 9 ರಂದು ಅಳವಡಿಸಲಾಯಿತು.
ವ್ಯವಸ್ಥಾಪಕ ನಿರ್ದೆಶಕರಾದ ಚನ್ನರಾಜ ಹಟ್ಟಿಹೊಳಿಯವರು ಮಾತನಾಡಿ ಎಲ್ಲ ಕಬ್ಬು ತುಂಬಿದ ವಾಹನಗಳು ಕಡ್ಡಾಯವಾಗಿ ಪ್ರತಿ ಫಲಕಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಆಗುವ ತೊಂದರೆಗಳನ್ನು ಸಂಭವಿಸಬಹುದಾದ ರಸ್ತೆ ಅಪಘಾತಗಳನ್ನು ತಡೆಗಟ್ಟಬಹುದು ಎಂದರು.
ಸವದತ್ತಿ ಪೋಲಿಸ್ ಠಾಣೆಯ ಎ.ಎಸ್.ಐ ಎಸ್ ಅರ್ ಗಿರಿಯಾಲ, ಎ.ಎಸ್.ಐ ಕೆ ಎಮ್ ಕಲ್ಲೂರ ಜೊತೆಗೆ ಕಾರ್ಖಾನೆಯ ಕಬ್ಬು ವಿಭಾಗದ ಪ್ರಧಾನ ವ್ಯವಸ್ಥಾಪಕರಾದ ಎನ್ ಎಮ್ ಪಾಟೀಲ ಹಾಗೂ ಸಹ ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.