ವಾಸ್ತವ ವರದಿ ಸಲ್ಲಿಸಲು ನಿರ್ವಹಣಾ ಮಂಡಳಿಗೆ ಸುಪ್ರೀಂ ಸೂಚನೆ

ಕಾವೇರಿ ವಿವಾದ
ನವದೆಹಲಿ,ಆ.೨೫- ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿನ ಜಲಾಶಯಗಳ ವಾಸ್ತವ ವರದಿ ಸಲ್ಲಿಸುವಂತೆ , ಕಾವೇರಿ ನೀರು ನಿರ್ವಹಣಾ ಮಂಡಳಿಗೆ ಸುಪ್ರೀಂ ಕೋರ್ಟ್ ಸೂಚಿಸಿವ ಮೂಲಕ, ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್.೧ಕ್ಕೆ ಮುಂದೂಡಿದೆ ಕಾವೇರಿ ನೀರಿಗಾಗಿ ಕ್ಯಾತೆ ತಗೆದಿರುವ ತಮಿಳುನಾಡು ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆಪ್ಟಂಬರ್ ೧ ಕ್ಕೆ ಮುಂದೂಡಿಕೆ ಮಾಡಿದೆ.
ತಮಿಳುನಾಡಿಗೆ ಬರಬೇಕಿದ್ದಂತ ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಕ್ಯಾತೆ ತೆಗೆದು, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಸಂಬಂಧ ಇಂದು ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಮೂರ್ತಿಗಳ ನ್ಯಾಯಪೀಠ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡು ನಿರ್ವಹಣಾ ಮಂಡಳಿಗೆ ನೋಟಿಸ್ ನೀಡಿ ಆರ್ಜಿ ವಿಚಾರಣೆ ಮುಂದೂಡಿದೆ.ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಕೆ ಆರ್ ಎಸ್ ಡ್ಯಾಂಗೆ ನೀರು ಸಂಗ್ರಹ ಕಡಿಮೆಯಾಗಿತ್ತು. ಈ ನಡುವೆಯೂ ಜಲವರ್ಷದ ಜೂನ್ ನಿಂದ ಆಗಸ್ಟ್ ವರೆಗೆ ನಿಗದಿ ಪ್ರಮಾಣದಲ್ಲಿ ಕಾವೇರಿ ನೀರನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಸುಪ್ರೀಂ ಕೋರ್ಟ್ ಗೆ ತಮಿಳುನಾಡು ಅರ್ಜಿಯನ್ನು ಸಲ್ಲಿಸಿತ್ತು.ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ಇಂದು ಕಾವೇರಿ ನದಿ ನೀರು ಬಿಡುಗಡೆ ವಿವಾದದ ಸಂಬಂಧದ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಾಯಿತು. ಕಾವೇರಿ ನದಿ ನೀರು ವಿಚಾರವಾಗಿ ವಾಸ್ತವ ವರದಿಯನ್ನು ಸಲ್ಲಿಸುವುದಕ್ಕೆ ಕಾವೇರಿ ನೀರಾವರಿ ಪ್ರಾಧಿಕಾರಕ್ಕೆ ಸೂಚಿಸಿದೆ.ಕರ್ನಾಟಕ ಸುಪ್ರೀಂ ಕೋರ್ಟ್ ಗೆ ಕಾವೇರಿ ನದಿ ನೀರು ವಿಚಾರವಾಗಿ ಅಫಿಡವಿಟ್ ಸಲ್ಲಿಸಿದ್ದು, ಕಾವೇರಿ ಕಣಿವೆ ನಾಲ್ಕೂ ಜಲಾಶಯಗಳ ವಸ್ತುಸ್ಥಿತಿಯನ್ನು ತೆರೆದಿಟ್ಟಿತ್ತು.ಕಾವೇರಿ ಕೊಳ್ಳದಲ್ಲಿ ಈ ಬಾರಿ ಶೇ.೪೨ರಷ್ಟು ಮಳೆ ಕೊರತೆ ಉಂಟಾಗಿದೆ. ಈ ಬಗ್ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲೂ ಚರ್ಚಿಸಲಾಗಿದೆ. ಸಾಮಾನ್ಯ ವರ್ಷದಲ್ಲಿ ಹೇಗೆ ನೀರು ಬಿಡಲಾಗುತ್ತದೋ ಅದೇ ರೀತಿಯಲ್ಲಿ ಈ ಬಾರಿ ಬಿಡುಗಡೆ ಮಾಡಬೇಕು ಎನ್ನುವುದು ತಮಿಳುನಾಡು ವಾದವಾಗಿತ್ತು.ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮಾಯಿಗಿ ನೀರಿನ ಅಭಾವ ಉಂಟಾಗಿದೆ. ವಿನಾಕಾರಣ ತಮಿಳುನಾಡು ೩೬.೭೬ ಟಿಎಂಸಿ ನೀರು ಕೇಳುತ್ತಿದೆ ಎಂಬುದಾಗಿ ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ನಲ್ಲಿ ರಾಜ್ಯ ಸರ್ಕಾರ ವಿವರಿಸಿತ್ತು.ಪ್ರಸ್ತುತ ಸಮಸ್ಯೆ ಸೃಷ್ಠಿಯಾಗಲು ತಮಿಳುನಾಡು ಕಾರಣ ಎಂದು ದೂರಿರುವಂತ ಕರ್ನಾಟಕ, ವಿನಾಕಾರಣ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಮೇಕೆದಾಟು ಜಲಾಶಯ ನಿರ್ಮಾಣವಾದರೇ ಮಳೆ ಕೊರತೆ ವರ್ಷದಲ್ಲಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬಹುದು.