ವಾಸವಿ ಸೇವಾ ಸಮಿತಿಯಿಂದ ಸಾವಿರ ಆಕ್ಸಿಜನ್ ಸಿಲಿಂಡರ್ ಭರ್ತಿಗೆ ಒಪ್ಪಿಗೆ

ಸಿರುಗುಪ್ಪ, ಮೇ.28: ನಗರದ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ವಾಸವಿ ಸೇವಾ ಸಮಿತಿಯ ವತಿಯಿಂದ ಸಾವಿರ ಆಕ್ಸಿಜಿನ್ ಸಿಲಿಂಡರ್ ಭರ್ತಿ ಮಾಡಿಸಿಕೊಡುವ ಒಪ್ಪಿಗೆ ಪತ್ರವನ್ನು ವ್ಯವಸ್ಥಾಪಕ ಮುತ್ಯಾಲಯ ಶೆಟ್ಟಿ ಅವರು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ದೇವರಾಜ ಅವರಿಗೆ ಹಸ್ತಾಂತರಿಸಿದರು.
ನಂತರ ಆಡಳಿತ ಅಧಿಕಾರಿ ಡಾ.ದೇವರಾಜ ಮಾತನಾಡಿದ ನಮ್ಮ ಸಾರ್ವಜನಿಕ ತಾಲೂಕು ಆಸ್ಪತ್ರೆಯಲ್ಲಿ 70 ಆಮ್ಲಜನಕ ಬೆಡ್‍ಗಳು ಇದ್ದು ನಿತ್ಯ 60 ಸೊಂಕಿತರಿಗೆ ಅವಶ್ಯಕವಾಗಿ ಆಕ್ಸಿಜನ್ ಬೇಕಾಗಿದ್ದು, ಇದನ್ನು ದಾನಿಗಳು ಗಮನಿಸಿ ಮುಂದೆ ಬಂದು ವಿವಿಧ ಸಂಘ ಸಂಸ್ಥೆಯವರು ಹಾಗೂ ವಾಸವಿ ಸೇವಾ ಸಂಸ್ಥೆಯವರು ಸಾವಿರ ಆಕ್ಸಿಜನ್ ಸಿಲಿಂಡರ್ ಭರ್ತಿ ಮಾಡಿಸಿಕೊಡಲು ಒಪ್ಪಿಗೆ ನೀಡಿರುವುದರಿಂದ ಕೋವಿಡ್ ಸೊಂಕಿತರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಇದೆ ಸಂದರ್ಭದಲ್ಲಿ ತಾಲೂಕು ಸಹಾಯಕ ಕೃಷಿ ನಿದೇರ್ಶಕ ನಜೀರ್ ಅಹ್ಮದ್, ಸಹ ವ್ಯವಸ್ಥಾಪಕರಾದ ಹೆಚ್.ಜೆ.ಕೃಷ್ಣಮೂರ್ತಿ, ಹೆಚ್.ಮಾಧವಯ್ಯ, ಯು.ಸಿ.ರಾಮಾಂಜಿನಿ ಶೆಟ್ಟಿ, ದೇವಂದ್ರಪ್ಪ, ಚಾಗಿ ಅನಂತ ಪದ್ಮನಾಭ, ಬಿ.ನಾರಾಯಣಮೂರ್ತಿ, ಪಣೀಂದ್ರ, ಪ್ರಾಣೇಶ, ಮಾರುತಿ, ಕೋಟಿರೆಡ್ಡಿ, ಬಿ.ಜೆ.ಶ್ರೀನಿವಾಸಶೆಟ್ಟಿ, ಶ್ರೀಧರ, ಸೂರ್ಯಪ್ರಕಾಶ ಸೇರಿದಂತೆ ಇದ್ದರು.