ವಾಸವಿ ಶಾಲೆಯಲ್ಲಿ ಭವ್ಯ ಭಾರತದ ಬಾಲ ನಾಯಕರು ಕಾರ್ಯಕ್ರಮ

ವಿಜಯಪುರÀ, ನ.28 – ವಾಸವಿ/ಲಿಟ್ಲಲ್ ಏಂಜಲ್ಸ್ ಸ್ಕೂಲ್ ಹಾಗೂ ಕಿಂಗ್ ಮೌರ್ಯಾಸ್ ಇಂಗ್ಲೀಷ ಮೀಡಿಯಂ ಸಂಯುಕ್ತ ಆಶ್ರಯದಲ್ಲಿ ಭವ್ಯ ಭಾರತದ ಬಾಲ ನಾಯಕರು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು
ಶಾಲಾ ಮಕ್ಕಳೆ ಈ ಕಾರ್ಯಕ್ರಮದ ಅಧ್ಯಕ್ಷತೆ ಹಾಗೂ ಮುಖ್ಯ ಅತಿಥಿಗಳ ಸ್ಥಾನ ಅಲಂಕರಿಸಿದ್ದು ವಿಶೇಷವಾಗಿತ್ತು. ಶಾಲಾ ಅಧ್ಯಕ್ಷರು ಹಾಗೂ ಪ್ರಾಚಾರ್ಯರರಾದ ಫಕೀರೇಶ.ಎನ್ ಎಮ್ಮಿಯರ್ ರವರು ನಮ್ಮ ಶಾಲೆಯಲ್ಲಿ ಭವಿಷ್ಯದಲ್ಲಿ ಏPSಅ & UPSಅ ಪರೀಕ್ಷೆಗಳಿಗೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ತರಬೇತಿ ನೀಡುವುದರ ಜೋತೆಗೆ ಮೌಲ್ಯಯುತ ಭವಿಷ್ಯದ ನಾಯಕರ ತರಬೇತಿಯನ್ನು ಡಿಜಿಟಲ್ ತರಗತಿಗಳ ಮೂಲಕ ನೀಡುತ್ತಿದ್ದೇವೆ ಎಂದು ಮಾತನಾಡಿದರು.
ಗಾಯಕ ಅಲ್ಲಭಕ್ಷಿ, ಶಿಕ್ಷಕರಾದ ಶ್ರೀಕಾಂತ, ಹೇಮಾ, ಚೈತ್ರಾ ಹಾಗೂ ಪಾಲಕರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಲಲೀತಾ ಎಲಿಗಾರ ನಿರೂಪಿಸದರು. ಸಲ್ಮಾ ಸ್ವಾಗತಿಸದರು, ನಸ್ರಿನ್ ರವರು ವಂದಿಸಿದರು.