ವಾಸವಿ ಭಜನಾ ಮಂಡಳಿಯಿಂದ ಮಡಲಕ್ಕಿ ಕಾರ್ಯಕ್ರಮ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೧೦: ನಗರದ ಡಿಸಿಎಂ ಟೌನ್ ಶಿಪ್ ನಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಭಜನಾ ಮಂಡಳಿ ವತಿಯಿಂದ ಅಧಿಕ ಮಾಸದ ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.ಅಧಿಕ ಮಾಸದ ನಿಮಿತ್ತ ವಿಶೇಷವಾಗಿ ವಾಸವಿ ಭಜನಾ ಮಂಡಳಿ ವತಿಯಿಂದ ೩೩ ದಾಸರ ಪದಗಳನ್ನು ವನಿತೆಯರು ಸಾಮೂಹಿಕವಾಗಿ ಹಾಡಿದರು. ನಂತರ ೩೩ ಮುತ್ತೈದೆಯರಿಗೆ ಮಡಲಕ್ಕಿ ಕಟ್ಟುವ ಮೂಲಕ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವವನ್ನು ವಾಸವಿ ಭಜನಾ ಮಂಡಳಿ ಅಧ್ಯಕ್ಷೆ  ಸೂರ್ಯಪ್ರಭ, ಪ್ರಧಾನಕಾರ್ಯದರ್ಶಿ ಪುಷ್ಪ, ಖಜಾಂಚಿ ಅನಿತಾ  ವಹಿಸಿದ್ದು, ಕಾರ್ಯಕಾರಿ ಮಂಡಳಿಯ ಎಲ್ಲ ನಿರ್ದೇಶಕರು ಹಾಗೂ ಸದಸ್ಯರು ಸಹಕಾರ ನೀಡಿದರು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಾಸವಿ ಸೇವಾ ಸಂಘದ ಅಧ್ಯಕ್ಷ ರುದ್ರಶೆಟ್ರು, ಕಾರ್ಯದರ್ಶಿ ಅಶೋಕ್ ಹಾಗೂ ಮಾಜಿ ಅಧ್ಯಕ್ಷ ತಿಪ್ಪೇಸ್ವಾಮಿ ಶೆಟ್ರು ಚಾಲನೆ ನೀಡಿದರು. ಅಧ್ಯಕ್ಷತೆಯನ್ನು ವಾಸವಿ ಭಜನಾ ಮಂಡಳಿ ಅಧ್ಯಕ್ಷೆ ಸೂರ್ಯಪ್ರಭಾ ವಹಿಸಿದ್ದರು.ಶಶಿಕಲಾ ಮತ್ತು ನೇತ್ರಾ ಪ್ರಾರ್ಥಿಸಿದರು. ಜಾನಕಮ್ಮ ಸ್ವಾಗತಿಸಿದರು. ಕೆ.ವಿ. ಅನಸೂಯಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಟಿ. ಮಂಜುಳ ವಂದಿಸಿದರು. ಎನ್. ಸುಜಾತ ನಿರೂಪಿಸಿದರು.