ವಾಸವಿ ಫೌಂಡೇಷನ್ ವತಿಯಿಂದ ಸನ್ಮಾನ


ಸಂಜೆವಾಣಿ ವಾರ್ತೆ
ಸಂಡೂರು:ಮಾ: 29: ಉತ್ತಮ ಹಾಗೂ ಸಮಾಜ ಮುಖಿ ಸೇವೆ ಸಲ್ಲಿಸಿದವರಿಗೆ ವಾಸವಿ ಸಮಾಜದ ಜೊತೆಗೆ, 6 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವಾಸವಿ ಫೌಂಡೇಶನ್ ನ ಎಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಫೌಂಡೇಶನ್ ನ, ಕಾರ್ಯಾಧ್ಯಕ್ಷ ರಾದ ಶ್ರೀ ವಿಷ್ಣು ಕುಮಾರ್ ಆರ್ ವಿ ವಕೀಲರು ಇವರು ಸಂಡೂರು ತಾಲೂಕಿನ ಸಂತ್ರಸ್ತ ಆರ್ಯವೈಶ್ಯರಿಗೆ ಕರೋನಾ ಸಮಯದಲ್ಲೂ ಆಹಾರ ಪದಾರ್ಥಗಳನ್ನು ತಲುಪಿಸಲು ಸಹ ಭಾಗಿತ್ವದಲ್ಲಿ ನೆರವಾದ ಹಾಗೂ ಆರ್ಯವೈಶ್ಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿರುತ್ತಾರೆ,
ಅಲ್ಲದೆ, ಇನ್ನೂ 5 ವರ್ಷಗಳ ಕಾಲ ಸಂಸ್ಥಾಪಕ ಕಾರ್ಯಕಾರಿ ಸಮಿತಿಯವರನ್ನೆ ಮುಂದುವರೆಸಿಕೊಂಡು ಹೋಗಲು ನೆರೆದ ಎಲ್ಲಾ ಪದಾಧಿಕಾರಿಗಳು ತೀರ್ಮಾನಿಸಲಾಯಿತು.