ವಾಸವಿ ಜಯಂತಿ ಅಂಗವಾಗಿ ವಾಸವಿ ಮಾತೆಗೆ ಮುತ್ತುಗಳ ಅಭಿಷೇಕ 

ಸಂಜೆವಾಣಿ ವಾರ್ತೆ

 ಹಿರಿಯೂರು.ಮೇ.೨೦; ವಾಸವಿ ಜಯಂತಿಯ ಅಂಗವಾಗಿ ಹಿರಿಯೂರಿನ ಆರ್ಯವೈಶ್ಯ ಮಂಡಳಿಯ ಸಹಕಾರದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯ ವತಿಯಿಂದ ವಾಸವಿ ಮಾತೆಗೆ  ಬಿಳಿ ಮುತ್ತುಗಳಿಂದ  ಅಭಿಷೇಕ ಕಾರ್ಯಕ್ರಮವನ್ನು ನಡೆಸಿದರು. ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಹಿಳಾ ಮಂಡಳಿಯ ಅಧ್ಯಕ್ಷರಾದ ನಾಗಸಂದರಮ್ಮ, ಕೆ ಎನ್ ಲತ, ಶ್ಯಾಮಲಮ್ಮ , ಶಾಂತ ಲಕ್ಷ್ಮಿ, ಸರಸ್ವತಿ, ರುಕ್ಮಿಣಿ , ಸಂಧ್ಯಾ , ಲತಾ, ಪದ್ಮ, ಜಯಲಕ್ಷ್ಮಿ , ಅನಿತಾ, ಶೋಭ, ಗಜಲಕ್ಷ್ಮಿ, ಉಮಾ ಮತ್ತಿತರರು ಭಾಗವಹಿಸಿದ್ದರು.