ವಾಸವಿ ಜಯಂತಿ ಅಂಗವಾಗಿ ಕ್ರೀಡಾಕೂಟ 

ಸಂಜೆವಾಣಿ ವಾರ್ತೆ

ಹಿರಿಯೂರು ಮೇ 16;-  ವಾಸವಿ ಜಯಂತಿಯ ಅಂಗವಾಗಿ ಹಿರಿಯೂರಿನ ವಾಸವಿ ಇಂಟರ್ನ್ಯಾಷನಲ್ ಕ್ಲಬ್ ಹಾಗೂ  ಕನ್ಯಕಾ  ಸ್ಪೋರ್ಟ್ಸ್ ಕ್ಲಬ್ ಇವರ ಸಹಯೋಗದಲ್ಲಿ ಶಟಲ್ ಬ್ಯಾಡ್ಮಿಂಟನ್ ಜೂನಿಯರ್ ಮತ್ತು ಸೀನಿಯರ್  ಸಿಂಗಲ್ಸ್ ಮತ್ತು ಡಬಲ್ಸ್ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿತ್ತು.ಆರ್ಯವೈಶ್ಯ ಮಂಡಳಿಯ ಅಧ್ಯಕ್ಷರಾದ ಎಚ್.ಎಸ್. ನಾಗರಾಜ ಗುಪ್ತ , ಕನ್ಯಕಾ ಸ್ಪೋರ್ಟ್ಸ್ ಕ್ಲಬ್ ನ  ಅಧ್ಯಕ್ಷರಾದ  ಹೆಚ್.ಎಸ್.ಪ್ರಶಾಂತ್ , ವಾಸವಿ ಕ್ಲಬ್ ನ ವಿ.ಜಗದೀಶ್ , ಆಂಜನೇಯ ಅರಳಿ ಕಟ್ಟೆ , ಟಿ.ಎಸ್. ಶಿವ ಪ್ರಸಾದ್,  ಪುರುಷೋತ್ತಮ್, ವಿಷ್ಣು , ಆದರ್ಶ್, ಮದನ್, ರಾಜೇಶ್ ,ಸಮರ್ಥ್ , ವತ್ಸ, ಪ್ರವೀಣ್, ಚಂದನ್, ರಂಗನಾಥ್,ಲಲನ್ ಕೃಷ್ಣ, ಸೌರವ್, ರಾಜಶ್ರೀ, ಜ್ವಲಂತ್, ತನ್ಮಯ್, ಧ್ಯಾನ್ ಸಾಯಿ, ಶ್ರಾವ್ಯ ಶ್ರೀ, ಅಮೂಲ್ಯ ,ಶ್ರೀ ಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.