ವಾಸವದತ್ತ ಸಿಮೆಂಟ್ ಕಂಪೆನಿಯಲ್ಲಿ ಯುವಕ ಸಾವು

ಸೇಡಂ,ನ,22: ವಾಸವದತ್ತ ಸಿಮೆಂಟ್ ಕಂಪೆನಿಯಲ್ಲಿಂದು (ಕಿಶೋರಾಂಮ್ ಸಿಮೆಂಟ್ ಇಂಟರೆಸ್ಟ್ರಿಯಲ್ಲಿ) ವರ್ಕರಾಗಿ ಕಾರ್ಯನಿರ್ವಹಿಸುತ್ತಿದ್ದು 25 ರ ವಯಸ್ಸಿನ ಸಿದ್ದುಪಟುವಾರಿ ಎಂಬ ಯುವಕನು ಇಂದು ಮುಂಜಾನೆ 6:00 ಗಂಟೆಗೆ ಕೆಲಸಕ್ಕಾಗಿ ಹೋಗಿದ್ದು ,7.30 ಗಂಟೆಗೆ ನಿಮ್ಮ ಅಣ್ಣನ ಸಾವಾಗಿದೆ ಎಂದು ಕಂಪನಿಯಿಂದ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದ್ದಾರೆ ಎಂದು ನಾಗರಾಜ ಅವರ ತಮ್ಮ ಸಂಜೆವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲಸ ನಿರ್ವಹಿಸುತ್ತಿದ್ದ ಮ್ಯಾನೇಜ್ಮೆಂಟ್, ಗುತ್ತಿಗೆದಾರರು ಹಾಗೂ ಸೂಪರ್ವೈಸರ್ ಡಾಕ್ಟರ್ ಸ್ಥಳದಲ್ಲಿ ಶವವನ್ನು ಬಿಟ್ಟು ನಾಪತ್ತೆಯಾಗಿದ್ದಾರೆ ಇದನ್ನು ಗಮನಿಸಿದರೆ ಹೃದಯಾಘಾತವೋ ಕೊಲೆಯೋ ಎಂದು ಅನುಮಾನ ಬಂದಿದೆ ಸ್ಪಷ್ಟೀಕರಣವನ್ನು ಕಂಪನಿಯವರು ನೀಡುವಂತೆ ಕುಟುಂಬಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.