ವಾಸದ ಗುಡಿಸಲುಗಳ ಒಳಹೋಗಿ ವಾಸ್ತವ ಅರಿತ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್

ಕೂಡ್ಲಿಗಿ. ಅ. 17 :-ರಾಜ್ಯಾದ್ಯಾಂತ ಶನಿವಾರ ಪ್ರಾರಂಭವಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಪ್ರಯುಕ್ತ ವಿಜಯನಗರ ಜಿಲ್ಲಾ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಅವರು ಕೂಡ್ಲಿಗಿ ತಾಲೂಕಿನ ಹಿರೇಹೆಗ್ಡಾಳ್ ಗ್ರಾಮವನ್ನು ಆಯ್ಕೆಮಾಡಿಕೊಂಡು ಶನಿವಾರ ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿದ ತಕ್ಷಣ ತಾವೇ ಓಣಿ ಓಣಿ ಸಂಚರಿಸಿ ಗುಡಿಸಲು ಮನೆಗಳ ಒಳ   ಹೋಗಿ ಗುಡಿಸಲುವಾಸಿಗಳ ಅಳಲನ್ನು ಆಲಿಸಿದರು. ನಂತರ ಗ್ರಾಮದ ಇನ್ನಿತರ ಸಮಸ್ಯೆಗಳ ವಾಸ್ತವ ಅಂಶಗಳನ್ನು ತಿಳಿದುಕೊಂಡರು.
 ಹಿರೇಹೆಗ್ಡಾಳ್ ಗ್ರಾಮದ ಮುಖ್ಯ ರಸ್ತೆಯಿಂದ  ಅಂಬೇಡ್ಕರ ಕಾಲೋನಿಯ ಆಶ್ರಯ ಬಡಾವಣೆಯಿಂದ ಪರಿಶಿಷ್ಠ ಪಂಗಡ ಕಾಲೋನಿಯಲ್ಲಿ ಭೇಟಿ ನೀಡಿ ಜನತೆಯ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿದರು. ಜಿಲ್ಲಾಧಿಕಾರಿಗಳ ಕ್ರಿಯಾಶೀಲತೆ ಕಂಡು ಜನತೆ ಸಹ ಬೆರಗಾದರು. ಗುಡಿಸಲು ಮನೆಗಳ ಒಳಗೆ ಹೋಗಿ ಜನರಿದ್ದಲ್ಲಿಗೆ  ಹೋಗಿ ಸಮಸ್ಯೆಗಳನ್ನು ಆಲಿಸಿದ್ದಕ್ಕೆ ಜನತೆ ಸಂತಸಗೊಂಡರು. ಕೂಡ್ಲಿಗಿ ತಾಲೂಕು ಆಡಳಿತ ಸಹ ಮುಂಜಾಗೃತಾ ಕ್ರಮಕೈಗೊಂಡು ಗ್ರಾಮದ ಕೆಲವು  ಸಮಸ್ಯೆಗಳನ್ನು ಮುಂಚೆಯೇ ಬಗೆಹರಿಸಿದ್ದರಿಂದ ಆರೋಪಗಳು ಕಡಿಮೆ ಇದ್ದವು.
    ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್ ಮಾತನಾಡಿ ನಾನು ಹಿರೇಹೆಗ್ಡಾಳ್ ಗ್ರಾಮದ ಓಣಿಗಳಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಕೇಳಿದ್ದೇನೆ ಅಲ್ಲದೇ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಣೆ ಮಾಡಿದ್ದು ಶಾಲೆಗಳನ್ನು ನೋಡಿ ತುಂಬಾ ಖುಷಿ ಆಗಿದೆ. ನಮ್ಮ ದೇಶ ಕಟ್ಟೋದು ಶಾಲೆಗಳ ಮೂಲಕವೇ ಆಗಿದೆ. ಈ ಹಳ್ಳಿಯಿಂದ ಬಹಳಷ್ಟು ಮಕ್ಕಳು ಇಂಜಿನೀಯರ್, ಡಾಕ್ಟರ್ ಆಗಬೇಕು ಎಂದರು. ಗ್ರಂಥಾಲಯಕ್ಕೆ ಭೇಟಿ ನೀಡಿದ್ದು  ಡಿಜಿಟಲ್ ಲೈಬ್ರರಿ ಮಾಡಿ ಮತ್ತೊಂದು ಕಟ್ಟಡ ಅಗತ್ಯಇದೆ ಆದಷ್ಟು ಬೇಗ ಇಂತಹ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ವಿಜಯನಗರ ಜಿಲ್ಲೆಯಲ್ಲಿ ಕೂಡ್ಲಿಗಿ ತಾಲೂಕು ಕೋವಿಡ್ ಲಸಿಕೆಯಲ್ಲಿ ಕಡಿಮೆ ಪ್ರಮಾಣ ಆಗಿದೆ. ಮೊದಲ ಲಸಿಕೆ ತೆಗೆದುಕೊಂಡವರು 2ನೇ ಲಸಿಕೆ ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಬೇಡಿ. ಈಗ ಹಬ್ಬ ಮುಗಿದಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳಿ ಎಂದು ನೆರೆದಿದ್ದ ರೈತರಿಗೆ ಮಹಿಳೆಯರಿಗೆ ಕಿವಿಮಾತು ಹೇಳಿದರು.
   ಗ್ರಾಮದ ಪರವಾಗಿ ಯುವಮುಖಂಡ ಅಕ್ಷಯಕುಮಾರ್ ಮಾತನತಾಡಿ ನಮ್ಮ ಹಳ್ಳಿಯನ್ನು ಡಿಜಿಟಲ್ ಗ್ರಾಮವನ್ನಾಗಿ ಮಾಡಲು  ಮುಂದಾಗಿದ್ದು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯನ್ನು ಹೋಗಲಾಡಿಸಿ ಮುಂದುರವೆಯುತ್ತಿರುವ ತಾಲೂಕನ್ನಾಗಿ ಮಾಡಬೇಕಿದೆ. ಹಿರೆಹೆಗ್ಡಾಳ್ ಗ್ರಾಮದಲ್ಲಿಯ ಸಮಸ್ಯೆಗಳನ್ನು ಹಾಗೂ ಅಭಿವೃದ್ಧಿ ಮಾಡಬೇಕಾದ ಕಾರ್ಯಗಳ ಬಗ್ಗೆ ತಿಳಿಸಿದರು.  ನಮ್ಮ ನೂತನ ವಿಜಯನಗರ ಜಿಲ್ಲೆಗೆ ಕ್ರಿಯಾಶೀಲ ಜಿಲ್ಲಾಧಿಕಾರಿಗಳು ಬಂದಿದ್ದು ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುತ್ತಾರೆಂಬ ನಂಬಿಕೆ ಇದೆ ಎಂದರು.
  ಕಾರ್ಯಕ್ರಮದಲ್ಲಿ  ಗ್ರಾ.ಪಂ.ಅಧ್ಯಕ್ಷೆ ಅಶ್ವಿನಿ ಪಕ್ಕಿರಪ್ಪ ಅಧ್ಯಕ್ಷತೆವಹಿಸಿದ್ದರು. ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ,
ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್, ತಾ.ಪಂ.ಇಓ ಬಸಣ್ಣ, ಕೂಡ್ಲಿಗಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ, ಬಿಇಓ ಉಮಾದೇವಿ, ಸ್ಥಳೀಯ ಎಸ್.ಡಿ.ಎಂ.ಸಿ.ಅಧ್ಯಕ್ಷರು, ಪದಾಽಕಾರಿಗಳು, ಗ್ರಾಮ ಪಂಚಾಯ್ತಿ ಸದಸ್ಯರು ಹಾಜರಿದ್ದರು. ವೇದಿಕೆಯಲ್ಲಿಯೇ ಸಂಧ್ಯಾಸುರಕ್ಷಾ ಯೋಜನೆ ಫಲಾನುಭವಿಗಳಿಗೆ  ಹಾಗೂ ಅಂಗವಿಕಲರಿಗೆ ಪ್ರಮಾಣಪತ್ರಗಳು, ಭೂಮಿ ಖಾತೆ ಬದಲಾವಣೆ, ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಜಿಲ್ಲಾಽಕಾರಿಗಳು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು.
 ಹಿರೇಹೆಗ್ಡಾಳ್ 274 ಅರ್ಜಿಗಳು :  ಶನಿವಾರ ತಾಲೂಕಿನ ಹಿರೇಹೆಗ್ಡಾಳ್ ನಲ್ಲಿ ನಡೆದ ಜಿಲ್ಲಾಽಕಾರಿಗಳ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳಿಂದ ಒಟ್ಟು  274ಅರ್ಜಿಗಳು ಬಂದಿದ್ದು ಈ ಅರ್ಜಿಗಳನ್ನು ಪರಿಶೀಲಿಸಿ ನ್ಯಾಯಸಮ್ಮತ ಅರ್ಜಿಗಳನ್ನು ಬಗೆಹರಿಸುವುದಾಗಿ ಕೂಡ್ಲಿಗಿ ತಹಶೀಲ್ದಾರ್ ಟಿ.ಜಗದೀಶ್ ತಿಳಿಸಿದ್ದಾರೆ.
    ಸ್ಥಳದಲ್ಲಿಯೇ ಜಿಲ್ಲಾಕಾರಿಗಳು 15 ಜನರಿಗೆ ವಿವಿಧ ಯೋಜನೆಗಳಿಂದ ಪಿಂಚಣಿ ಮುಂಜೂರು ಹಾಗೂ 10 ರೈತರಿಗೆ ಪೋತಿ ಖಾತೆ ಬದಲಾವಣೆ ಮಾಡಲಾಯಿತು. ಇದಲ್ಲದೇ ಕಂದಾಯ ಇಲಾಖೆಗೆ 65 ಅರ್ಜಿಗಳು ಬಂದಿದ್ದು, ರಾಷ್ಟ್ರೀಯ ಹೆದ್ದಾರಿಗೆ ಸಂಬಂಽಸಿದಂತೆ 38 ಅರ್ಜಿಗಳು, ಆರ್.ಡಿ.ಪಿ.ಆರ್.ಸಂಬಂಸಿದಂತೆ145 ಅರ್ಜಿಗಳು, ಮುಜರಾಯಿ ಇಲಾಖೆಯ 4 ಅರ್ಜಿಗಳು, ಬಿಸಿಎಂ ಇಲಾಖೆಯ 3ಅರ್ಜಿಗಳು,  ಲೋಕೋಪಯೋಗಿ ಇಲಾಖೆಗೆ 3 ಅರ್ಜಿಗಳು, ಬಿಇಓ ಇಲಾಖೆಗೆ 2ಅರ್ಜಿಗಳು, ಕೆಪಿಟಿಸಿಎಲ್ 1ಅರ್ಜಿ, ಪಿಜಿಬಿ ಬ್ಯಾಂಕ್ 3 ಅರ್ಜಿ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಗೆ 1ಅರ್ಜಿ,  ಗ್ರಾಮ ಪಂಚಾಯ್ತಿಗೆ 1 ಅರ್ಜಿ,  ಉದ್ಯೋಗ ಇಲಾಖೆ 1ಅರ್ಜಿ,  ಸಣ್ಣನೀರಾವರಿ 1 ಅರ್ಜಿ,  ಸಮಾಜ ಕಲ್ಯಾಣ 2 ಅರ್ಜಿ,  ಆರೋಗ್ಯ ಇಲಾಖೆ 2ಅರ್ಜಿ ಸೇರಿದಂತೆ ಒಟ್ಟು 274 ಅರ್ಜಿಗಳು ಬಂದಿವೆ ಎಂದು ತಹಶೀಲ್ದಾರರು ತಿಳಿಸಿದ್ದಾರೆ.