ವಾಸಂತಿ ನಲಿದಾಗ ಸದ್ದು ಮಾಡಿದ ಹಾಡು

ವಿಭಿನ್ನ ಶೀರ್ಷಿಕೆಯ ” ವಾಸಂತಿ ನಲಿದಾಗ”‌‌ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎಲ್ಲಾ ಅಂದುಕೊಂಡಂತೆ ಆದರೆ  ಮುಂದಿನ ತಿಂಗಳು ತೆರೆಗೆ ಬರಲು ಸಜ್ಜಾಗಿದೆ. ಶೀರ್ಷಿಕೆ  ಕೇಳಿ ಇದೊಂದು ಕಾಮಿಡಿ ಜಾನರ್ ಸಿನಿಮಾ ಅಂದುಕೊಂಡವರಿಗೆ, ಉತ್ತರ ಪಕ್ಕಾ ಕಾಲೇಜ್ ಯೂತ್ ಲವ್ ಸ್ಟೋರಿ ಸಬ್ಜೆಕ್ಟ್ ಸಿನಿಮಾ ಎಂದು ಸಮಜಾಯಿಷಿ ನೀಡಿದೆ.ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.

‘ಕೇಳ್ರಪ್ಪೋ ಕೇಳಿ’ ಹಾಡನ್ನು ಬಿಡುಗಡೆಯಾಗಿದ್ದು. ಮೆಚ್ಚುಗೆಗೆ ಪಾತ್ರವಾಗಿದ್ದು  ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ಗೌಸ್ ಫೀರ್ ಸಾಹಿತ್ಯ ಹಾಡಿಗೆ ಶ್ರೀ ಗುರು  ಸಂಗೀತ ನಿರ್ದೇಶನವಿದೆ. ಸಶಶಾಂಕ್ ಶೇಷಗಿರಿ, ಪ್ರಿಯಾಂಕ ಶ್ರೀಗುರು, ಶ್ರೀಗುರು ಹಾಡಿಗೆ ದನಿಯಾಗಿದ್ದಾರೆ. ಚಿತ್ರದಲ್ಲಿ ರೋಹಿತ್ ಶ್ರೀಧರ್, ಭಾವನ ಶ್ರೀನಿವಾಸ್, ಜೀವಿತ ವಸಿಷ್ಠ ನಟಿಸಿದ್ದಾರೆ.

ಜೇನುಗೂಡು ಕೆ.ಎನ್ ಶ್ರೀಧರ್ ಬಂಡವಾಳ ಹೂಡಿದ್ದು, ರವೀಂದ್ರ ವಂಶಿ ಆಕ್ಷನ್ ಕಟ್ ಹೇಳಿದ್ದು ರೋಮ್ಯಾಂಟಿಕ್ ಕಥಾಹಂದರ, ಕಾಲೇಜ್ ಯೂತ್ ಲವ್ ಸ್ಟೋರಿ ಒಳಗೊಂಡ ಸಬ್ಜೆಕ್ಟ್ ಹೊತ್ತು ಹೊಸ ಪ್ರತಿಭೆಗಳೊಂದಿಗೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಗೌಸ್ ಫೀರ್ ಸಾಹಿತ್ಯವಿದೆ.  ಪ್ರಮೋದ್ ಭಾರತೀಯ ಛಾಯಾಗ್ರಾಹಣವಿದೆ. ಸಾಯಿಕುಮಾರ್, ಸುಧಾರಾಣಿ, ಸಾಧುಕೋಕಿಲ, ಮಂಜು ಪಾವಗಡ, ಮಿಮಿಕ್ರಿ ಗೋಪಿ ಒಳಗೊಂಡ ಅನುಭವಿ ಹಾಗೂ ಕಲರ್ ಫುಲ್ ಕಲಾವಿದರ ದಂಡು ಚಿತ್ರದಲ್ಲಿದೆ.