ವಾಷಿಂಗ್ ಮಿಷನ್‌ನಲ್ಲಿ ನೋಟು ತೊಳೆದ ಭೂಪ

ಸಿಯೋಲ್, ಆ. ೨- ಕೊರೊನಾ ಸೋಂಕು ಜನರನ್ನು ಯಾವಭೀತಿಗೆ ಸಿಲುಕಿಸಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ. ಸೋಂಕು ತಗುಲುವ ಭಯದಲ್ಲಿ ವ್ಯಕ್ತಿಯೊಬ್ಬರು ನೋಟುಗಳನ್ನೇ ವಾಷಿಂಗ್ ಮಿಷನ್‌ಗೆ ಹಾಕಿ ತೊಳೆದಿದ್ದಾರೆ.
ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ವ್ಯಕ್ತಿಯೊಬ್ಬರು ಈ ರೀತಿ ಮಾಡಿರುವುದು ಪುರುಷ ಅಥವಾ ಮಹಿಳೆ ಎಂಬುದು ತಿಳಿದು ಬಂದಿಲ್ಲ.
ಕೊರೊನಾ ವೈರಸ್‌ನಿಂದ ತಪ್ಪಿಸಿಕೊಳ್ಳಲು ೫೦ ಸಾವಿರ ವೋನ್ (೩.೧೩೭ ರೂ.) ವಾಷಿಂಗ್‌ಮಿಷಿನ್‌ಗೆ ಹಾಕಿ ತೊಳೆದಿದ್ದಾರೆ ವರದಿಯಾಗಿದೆ. ಕುಟುಂಬದವರು ನಿಧನರಾಗಿದ್ದಾಗ ಸಂಬಂಧಿಕರು ಹಾಗೂ ಸ್ನೇಹಿತರು ವ್ಯಕ್ತಿಗೆ ೩.೧೩೭ ರೂ. ಸಂತಾಪ ಹಣವಾಗಿ ನೀಡಿದ್ದಾರೆ.
ಈ ಹಣ ನೀಡಿದವರಲ್ಲಿ ಯಾರಾದರೂ ಕೊರೊನಾ ಸೋಂಕಿತರು ಇದ್ದರೆ ತಮಗೂ ಕೊರೊನಾ ಸೋಂಕು ಹರಡಬಹುದೆಂದು ವಾಷಿಂಗ್ ಮಿಷಿನ್‌ಗೆ ಹಾಕಿ ತೊಳೆದಿದ್ದಾರೆ. ಆದರೆ ವಾಷಿಂಗ್ ಮಿಷಿನ್‌ನಲ್ಲಿ ಒಂದು ಬಾರಿ ಸ್ಪಿನ್ ಆಗುತ್ತಿರುವಾಗಲೇ ನೋಟುಗಳು ಉಪಯೋಗಕ್ಕೆ ಬಾರದಂತಾಗಿವೆ.
ಈ ನೋಟುಗಳನ್ನು ಬ್ಯಾಂಕಿಗೆ ತೆಗೆದುಕೊಂಡು ಬ್ಯಾಂಕ್ ಆಫ್ ಕೊರಿಯಾಗೆ ತೆಗೆದುಕೊಂಡು ಹೋಗಿದ್ದಾನೆ. ನೋಟುಗಳು ಹಾಳಾಗಿವೆ ಬದಲಿ ನೋಟು ಕೊಡುವಂತೆ ಬ್ಯಾಂಕ್ ಸಿಬ್ಬಂದಿಗೆ ಕೇಳಿದ್ದಾರೆ. ಆದರೆ ಬ್ಯಾಂಕ್‌ನವರು ಹೊಸ ನೋಟು ಕೊಡಲು ನಿರಾಕರಿಸಿದ್ದಾರೆ.