ವಾಷಿಂಗ್ಟನ್ ಸುಂದರ್ ಟ್ವಿಟರ್ ಖಾತೆ ಹ್ಯಾಕ್

ನವದೆಹಲಿ,ಜೂ.೫-ಭಾರತೀಯ ಕ್ರಿಕೆಟ ಆಟಗಾರ ವಾಷಿಂಗ್ಟನ್ ಸುಂದರ್ ಅವರ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ಈವರೆಗೆ ಕ್ರಿಕೆಟರ್ ಖಾತೆಯಿಂದ ಮೂರು ಪೋಸ್ಟ್ ಗಳು ಮಾತ್ರ ಬಂದಿವೆ. ಕ್ರಿಕೆಟ್ ಸಂಬಂಧಿತ ಟ್ವಿಟರ್ ಖಾತೆ ಹ್ಯಾಕ್ ಆಗುತ್ತಿರುವುದು ಇದೇ ಮೊದಲಲ್ಲ.
ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹ್ಯಾಂಡಲ್ ಎರಡು ಬಾರಿ ಹ್ಯಾಕ್ ಆಗಿದ್ದು, ೨೦೨೧ರಲ್ಲಿ ಒಂದು ಬಾರಿ ಹಾಗೂ ಈ ವರ್ಷದ ಜನವರಿಯಲ್ಲಿ ಇತ್ತೀಚೆಗೆ ಹ್ಯಾಕ್ ಆಗಿದೆ. ಅಂದಿನಿಂದ ಸುಂದರ್ ಅವರ ಪೋಸ್ಟ್‌ಗಳಿಗೆ ಕಮೆಂಟ್‌ಗಳು ಬ್ಲಾಕ್ ಆಗಿವೆ.
ಕಳೆದ ವರ್ಷ ಕ್ರಿಕೆಟಿಗ ಕೃಣಾಲ್ ಪಾಂಡ್ಯ ಅವರ ಖಾತೆಯನ್ನೂ ಬಿಟ್ ಕಾಯಿನ್ ಸ್ಕ್ಯಾಮರ್ ಹ್ಯಾಕ್ ಮಾಡಿದ್ದರು. ಹ್ಯಾಕ್ ಆಗಿರುವ ಖಾತೆಯ ಒಂದು ಟ್ವೀಟ್ ನಲ್ಲಿ ಅವರು ಬಿಟ್ ಕಾಯಿನ್ ಗಾಗಿ ಖಾತೆಯನ್ನು ಮಾರಾಟ ಮಾಡುತ್ತಿದ್ದಾರೆ ಎಂದೂ ಹೇಳಲಾಗಿತ್ತು.
ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ಸುಂದರ್, ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದಿದ್ದರು.