ವಾಲ್ಮೀಕಿ ಸಂದೇಶಗಳು ಉತ್ತಮ ಸಮಾಜಕ್ಕೆ ಸ್ಪೂರ್ತಿ

(ಸಂಜೆವಾಣಿ ವಾರ್ತೆ)
ಔರಾದ : ದೇಶದ ಸಂಸ್ಕøತಿ ಹಾಗೂ ಜೀವನ ಶೈಲಿ ಪ್ರತಿಬಿಂಬಿಸುವ ರಾಮಾಯಣ ಮಹಾಕಾವ್ಯದ ಮೂಲಕ ಇಡೀ ಪ್ರಪಂಚಕ್ಕೆ ರಾಮರಾಜ್ಯ ಪರಿಚಯಿಸಿದ ಕೀರ್ತಿ ವಾಲ್ಮೀಕಿ ಅವರದ್ದಾಗಿದ್ದು, ವಾಲ್ಮೀಕಿ ಅವರ ಸಂದೇಶಗಳು ಉತ್ತಮ ಸಮಾಜಕ್ಕೆ ಸ್ಪೂರ್ತಿ ಎಂದು ಔರಾದ್ ಖಜಾನಾಧಿಕಾರಿ, ಸಾಹಿತಿ ಮಾಣಿಕ ನೇಳಗಿ ನುಡಿದರು.
ಪಟ್ಟಣದ ತಹಸೀಲ್ ಸಭಾಂಗಣದಲ್ಲಿ ಶನಿವಾರ ತಾಲೂಕು ಆಡಳಿತದಿಂದ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದ ಅವರು, ಅಖಂಡ ಭಾರತ ನಿರ್ಮಾಣಕ್ಕೆ ಮಹರ್ಷಿ ವಾಲ್ಮೀಕಿ ಕೊಡಗೆ ಅಪಾರವಾಗಿದೆ. ವಾಲ್ಮೀಕಿ ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದವರಲ್ಲ. ಅವರ ಆದರ್ಶ ಶ್ರದ್ಧೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಇದರಿಂದ ಪ್ರೀತಿ, ವಿಶ್ವಾಸದಿಂದ ಬದುಕಲು ಸಾಧ್ಯ ಎಂದರು.
ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ, ಶಿಕ್ಷಕ ಅನೀಲ ಮಚಕೂರಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಅನೀಲಕುಮಾರ್, ರಾಮಣ್ಣ ವಡೆಯರ್, ಬಿಇಒ ಮಕ್ಸೂದ್ ಅಹ್ಮದ್, ಶಾಲಿವಾನ ಉದಗಿರೆ, ಸಂತೋಷ ಕೋಳಿ ಸೇರಿದಂತೆ ಇನ್ನಿತರರಿದ್ದರು