ವಾಲ್ಮೀಕಿ ಸಂಘದಿಂದ ಅನ್ನ ದಾಸೋಹ ಸಂತರ್ಪಣೆ!!

ಸಿರಿಗೇರಿ:ಅ,31: ಇಲ್ಲಿನ ವಾಲ್ಮೀಕಿ ಯುವಕ ಸಂಘದಿಂದ ವಾಲ್ಮೀಕಿ ಜಯಂತಿಯನ್ನು ಅನ್ನ ದಾಸೋಹ ನೆರವೇರಿಸುವ ಮೂಲಕ ವಿಶೇಷವಾಗಿ ಶನಿವಾರ ಆಚರಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಪ್ರಮುಖರು ವಾಲ್ಮೀಕಿ ಮಹರ್ಷಿ ಎಂದರೆ ಐತಿಹಾಸಿಕ ಮೈಲುಗಲ್ಲು. ಅವರು ರಚಿಸಿದ ರಾಮಾಯಣ ಎಂಬ ಗ್ರಂಥ ದೇಶ ಮಾತ್ರವಲ್ಲ. ಇಡೀ ಜಾಗತಿಕ ಮನ್ನಣೆ ಗಳಿಸಿದೆ. ಇಂತಹಾ ಮಹಾನ್ ಗ್ರಂಥಕರ ಆದರ್ಶ ಗಣಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕೆಂದರು. ಈ ಸಂಧರ್ಭದಲ್ಲಿ ಸುಮಾರು ನೂರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕ ದಾಸೋಹ ಸ್ವೀಕರಿಸಿದರು. ದಾಸೋಹವನ್ನು ವಾಲ್ಮೀಕಿ ಯುವಕ ಸಂಘದಿಂದ ನೆರವೇರಿಸಲಾಯಿತು.