ವಾಲ್ಮೀಕಿ ಶ್ಲೋಕ ವಾಲ್ಮೀಕಿ ಜಯಂತಿಯಿಂದ ಧ್ವನಿ ಮುದ್ರಣ ಲೋಕಾರ್ಪಣೆ

ಸಂಜೆವಾಣಿ ವಾರ್ತೆ
ಹೊಸಪೇಟೆ ಅ17: ಆದರ್ಶ ಬದುಕಿನ ಮಾರ್ಗಸೂಚಿಯಾದ ವಾಲ್ಮೀಕಿ ಗುರುಗಳ ಶ್ಲೋಕ “ಕೂಜಂತಂ ರಾಮ ರಾಮೇತಿ” ಶ್ಲೋಕ ಇಂದು ಮನೆಯಲ್ಲಿ ಸುಪ್ರಭಾತವಾಗಿ ಪರಿಣಮಿಸಲಿದೆ  ಎಂದು ನಿವೃತ್ತ ಉಪನ್ಯಾಸಕ ಡಾ. ಫೊನ್ನಂಗಧರ್ ಹೇಳಿದರು.
ಹೊಸಪೇಟೆಯ ವಾಲ್ಮೀಕಿ ಸಮುದಾಯಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೆ 20 ರಂದು ವಾಲ್ಮೀಕಿ ಜಯಂತಿಯಲ್ಲಿ ಶ್ಲೋಕ ಧ್ವನಿಮುದ್ರಣರೂಪದಲ್ಲಿ ಹೊರಬರುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಅಂದಿನಿಂದ ಈ ಶ್ಲೋಕಗೀತೆ ಸಮುದಾಯದ ಹಾಗೂ ಪ್ರತಿಯೊಬ್ಬರ ಮನೆಯ ಸುಪ್ರಭಾತವಾಗುವ ಮೂಲಕ ಆದರ್ಶ ಪುರುಷರ ನಿತ್ಯಸ್ಮರಣೆ ನಮ್ಮ ಬದುಕಿಗೂ ಆದರ್ಶವಾಗಿ ಹೊಸ ಭಾರತ ನಿರ್ಮಾಣಕ್ಕೆ ನಾಂದಿಯಾಗಲಿ, ಇಂತಹ ಅದ್ಭುತ ಮಹಾಗ್ರಂಥವನ್ನು ವಾಲ್ಮೀಕಿ ಗುರುಗಳು ರಚಿಸಿರುವುದು ಎನ್ನುವುದು ಹೆಮ್ಮೆ ಎಂದರು.
ಅಂತಯೇ ವಾಲ್ಮೀಕಿ ಗುರುಗಳ ಅನೇಕ ಗ್ರಂಥ, ಶ್ಲೋಕಗಳು ಸಹ ಈರೀತಿ ಗೀತಗಾಯನದೊಂದಿಗೆ ಮುಡಿಬಂದಲ್ಲಿ ಅವುಗಳಿಗೂ ನಾವು ಹೊಸ ಆಯಾಮನೀಡಲು ಸಾಧ್ಯ ಎಂದರು. ಮತ್ತು ಇಂದಿನ ಕಾಲಘಟ್ಟದಲ್ಲಿ ಧ್ವನಿರೂಪವಾಗಿ ಹೊರಬರುವದು ಸೂಕ್ತ ಎಂದರು ಇದು ನಮ್ಮ ಸಾಹಿತ್ಯದ ಘನತೆಯನ್ನು ಎತ್ತಿಹಿಡಿಯಲು ಸಹಕಾರಿಯಾಗಲಿದೆ ಎಂದರು.
ಬಾಪು ಪದ್ಮನಾಭ ಕೊಳಲವಾದ್ಯದೊಂದಿಗೆ ರಚನೆಗೊಂಡಿರುವ ಈ ಧ್ವನಿಸುರುಳಿಯಲ್ಲಿ ಎಸ್.ಎಸ್.ಚಂದ್ರಶೇಖರ ಧ್ವನಿಗೂಡಿಸಿದ್ದಾರೆ. ವಿಜಯನಗರ ಜಿಲ್ಲಾಡಳಿತ 20 ರಂದು ಹಮ್ಮಿಕೊಂಡ ವಾಲ್ಮೀಕಿ ಜಯಂತಿಯಲ್ಲಿ ಧ್ವನಿಸುರುಳಿ ಬಿಡುಗಡೆಗೊಳ್ಳಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಸ್.ಎಸ್.ಚಂದ್ರಶೇಖರ, ನಾಣಿಕೇರಿ ತಿಮ್ಮಪ್ಪ, ಬಂಡೆರಂಗಪ್ಪ, ನಾಣಿಕೇರಿ ಕನಕಪ್ಪ, ಬಿ.ಎಸ್.ಜಂಬಯ್ಯನಾಯಕ್, ಯಮನೂರಪ್ಪ, ಸೇರಿದಂತೆ ಅನೇಕರು ಗೋಷ್ಠಿಯಲ್ಲಿ ಪಾಲಗೊಂಡಿದ್ದರು.