ವಾಲ್ಮೀಕಿ ವಿಚಾರ ಸಂಕಿರಣ

ಬಂಗಾರಪೇಟೆ,ಸೆ೪:ಶ್ರೀ ವಾಲ್ಮೀಕಿ ಮಹಾಋಷಿ ಅವರು ರಾಮಾಯಣವನ್ನು ರಚನೆ ಮಾಡಿದ್ದು, ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಪ್ರತಿಯೊಬ್ಬ ಪ್ರಜೆಯು ವಾಲ್ಮೀಕಿ ರಚನೆ ಮಾಡಿರುವ ರಾಮಾಯಣವನ್ನು ತಮ್ಮ ಹೃದಯಗಳಲ್ಲಿ ಮನದಟ್ಟು ಮಾಡಿಕೊಳ್ಳಬೇಕು. ಹಾಗೂ ವಾಲ್ಮೀಕಿ ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯ ಸಂಚಾಲಕರಾದ ಕಾವರನಹಳ್ಳಿ ವಾಲ್ಮೀಕಿ ಬೆಟ್ಟಪ್ಪ ಕರೆ ನೀಡಿದರು.
ಅವರು ಇಂದು ಪಟ್ಟಣದ ವಾಲ್ಮೀಕಿ ಸ್ವಾಭಿಮಾನಿ ಸಂಘದ ಕಚೇರಿಯಲ್ಲಿ ಶ್ರೀ ವಾಲ್ಮೀಕಿ ಅವರ ವಿಚಾರ ಸಂಕೀರ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಶ್ರೀ ವಾಲ್ಮೀಕಿ ಅವರ ರಚನೆ ಮಾಡಿರುವ ರಾಮಾಯಣ ಗ್ರಂಥದಲ್ಲಿ ಇಡೀ ಸಮಾಜಕ್ಕೆ ಬೇಕಾಗಿರುವ ಅಂಶಗಳಿದ್ದು, ಸಮಾಜದ ಏಳಿಗೆಗೆ ಹಾಗೂ ಸಮಾಜಕ್ಕೆ ದಾರಿದೀಪವಾಗಿದೆ. ಅಯೋಧ್ಯ ಪೂರ್ಣಗೊಳ್ಳುವ ಹೊತ್ತಿಗೆ ಶ್ರೀರಾಮನ ವಿಗ್ರಹ ಜೊತೆಗೆ ಇಡೀ ವಿಶ್ವಕ್ಕೆ ಹೊಂಬೆಳಕು ಚೆಲ್ಲಿದಂತಹ ಮಹಾನ್ ಮಹಾಋಷಿ ಅವರ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಇಂದಿನ ಯುವ ಪೀಳಿಗೆ ಮಾಋಷಿ ವಾಲ್ಮೀಕಿ ಅವರ ರಚನೆ ಮಾಡಿರುವ ಮಹಾನ್ ಗ್ರಂಥವಾದ ರಾಮಾಯಣವನ್ನು ಜೀವನ ಉದ್ದವಾಗಿಸಿಕೊಂಡು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಸಲಹೆ ನೀಡಿದರು.
ನಮ್ಮ ಸಂಘದ ವತಿಯಿಂದ ತಾಲೂಕು ಹೋಬಳಿಗಳ ಮಟ್ಟದಲ್ಲಿ ವಾಲ್ಮೀಕಿ ಅವರ ಬಗ್ಗೆ ಜಾಗೃತಿ ಹಾಗೂ ಮೂಡಿಸಲು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು. ಶ್ರೀ ವಾಲ್ಮೀಕಿ ಅವರು ಯಾವುದೇ ರೀತಿಯ ಜಾತಿ ಭೇದವಿಲ್ಲದೆ ಸಮಾನತೆ ಹಾಗೂ ನ್ಯಾಯ ನೀತಿ ನಿಷ್ಠೆ ಪ್ರಾಮಾಣಿಕತೆ ಧರ್ಮಕ್ಕೆ ಹೆಚ್ಚು ಒತ್ತು ನೀಡುತ್ತಾ, ಮರೆಯಲಾಗದ ಮಾಣಿಕ್ಯವಾಗಿದ್ದಾರೆ ಎಂದು ಹೇಳಿದರು. ಇಡೀ ಜಗತ್ತಿರುವ ತನಕ ಇವರ ಹೆಸರು ಅಜರಾಮರವಾಗಿರುತ್ತದೆ. ಆದರಿಂದ ಪ್ರತಿಯೊಬ್ಬರು ಶ್ರೀ ವಾಲ್ಮೀಕಿ ಅವರ ತತ್ವಗಳನ್ನು ಅಳವಡಿಸಿಕೊಂಡು ಸುಖಮಯ ಜೀವನ ಸಾಗಿಸೋಣ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಾಲ್ಮೀಕಿ ಸ್ವಾಭಿಮಾನ ಸಂಘದ ಗೌರವಾಧ್ಯಕ್ಷ ಯಲುವಹಳ್ಳಿ ಸಿ.ರಾಮಯ್ಯ, ತಾಲೂಕು ಅಧ್ಯಕ್ಷ ಯಲುವಹಳ್ಳಿ ನಾಗರಾಜು, ರಾಮಕೃಷ್ಣಪ್ಪ, ತಿಮ್ಮರಾಯಪ್ಪ, ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು.