ವಾಲ್ಮೀಕಿ ರಚಿಸಿದ ರಾಮಾಯಣ ನಮಗೆಲ್ಲಾ ಆದರ್ಶ -ಶಾಸಕ ಎನ್. ವೈ. ಜಿ.

ಕೂಡ್ಲಿಗಿ. ಅ. 31:-ದರೋಡೆಕೋರನಾಗಿದ್ದ ರತ್ನಾಕರ ಎಂಬಾತನು ನಂತರದ ದಿನಗಳಲ್ಲಿ ಆದ ಬದಲಾವಣೆಯಿಂದ ಮಹಾತಪಸ್ವಿ, ಮಹರ್ಷಿ, ಆದಿಕವಿ ವಾಲ್ಮೀಕಿಯಾಗಿ ರಾಮನ ಪುತ್ರರಿಗೆ ಗುರುಕುಲ ಆಶ್ರಯನೀಡಿ ರಾಮಾಯಣ ಎಂಬ ಮಹಾನ್ ಗ್ರಂಥ ರಚಿಸಿ ಇಡೀ ಜಗತ್ತಿಗೆ ಮಾದರಿಯಾಗಿದ್ದು ವಾಲ್ಮೀಕಿ ರಚಿಸಿದ ರಾಮಾಯಣ ಇಂದಿಗೂ ನಮಗೆಲ್ಲಾ ಜೀವನದಲ್ಲಿ ಆದರ್ಶವಾಗಿದೆ ಎಂದು ಕೂಡ್ಲಿಗಿ ಶಾಸಕ ಎನ್. ವೈ. ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಟ್ಟಣದ ಶ್ರೀ ವಾಲ್ಮೀಕಿ ದೇಗುಲಕ್ಕೆ ಭೇಟಿ ನೀಡಿ ವಾಲ್ಮೀಕಿ ಪುತ್ಥಳಿಗೆ ಪೂಜೆ ಸಲ್ಲಿಸಿ ನಂತರ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಮಾತನಾಡುತ್ತ ಶ್ರೀ ವಾಲ್ಮೀಕಿ ರಚಿಸಿದ ಮಹಾಗ್ರಂಥ ರಾಮಾಯಣ ಜಗತ್ತಿನ ಮಹಾಗ್ರಂಥಗಳಲ್ಲಿ ಒಂದಾಗಿದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದೆ ಎಂದರು. ಪಟ್ಟಣದಲ್ಲಿ ನಿರ್ಮಾಣವಾಗಿರುವ ಶ್ರೀ ವಾಲ್ಮೀಕಿ ಭವನದ ಉದ್ಘಾಟನೆಗೆ ರಾಜ್ಯದ ಸಿಎಂ ಸೇರಿದಂತೆ ಪ್ರಮುಖ ನಾಯಕರನ್ನು ಕರೆಸುವ ಉದ್ದೇಶವಿದ್ದು ಅದರ ಜೊತೆಗೆ ಪಟ್ಟಣದ ಕರೆಕಲ್ಲು ಬಗಡಿಯ ಹತ್ತಿರ ನಿರ್ಮಿಸಲಾಗಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನೂತನ ಕಟ್ಟಡ ಸಹ ಅದೇ ಸಮಯದಲ್ಲಿ ಉದ್ಘಾಟನೆಗೊಳಿಸುವ ಬಗ್ಗೆ ಸದ್ಯದಲ್ಲೇ ತಿರ್ಮಾನಿಸಲಾಗುವುದಾಗಿ ತಿಳಿಸಿದರು. ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರುಹನುಮಂತ ಮಾತನಾಡಿದರು ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ಎಸ್. ಸುರೇಶ, ನಿಕಟಪೂರ್ವ ಅಧ್ಯಕ್ಷ ಜಯರಾಮನಾಯಕ, ಸೂರ್ಯಪಾಪಣ್ಣ, ಸಿಪಿಐ ಪಂಪನಗೌಡ, ಪಿಎಸ್ಐ ತಿಮ್ಮಣ್ಣ ಚಾಮನೂರ್, ಹೋಟೆಲ್ ಬಾಲರಾಜ,ಮಂಜುನಾಥ, ಶ್ರೀಕಾಂತ್, ಅಶೋಕ್, ಶಿಕ್ಷಣ ಇಲಾಖೆಯ ಕೊತ್ಲಾಪ್ಪ, ಶರಣಪ್ಪ, ಕೊಟ್ರೇಶಪ್ಪ ಹಾಗೂ ಇತರರು ಉಪಸ್ಥಿತರಿದ್ದರು ಹಾಗೂ ಸರ್ಕಾರಿ ನೌಕರರಿಗೆ ನಿವೃತ್ತಿ ನಂತರ ನೀಡುವ ಪಿಂಚಣಿ ಹಣದ ಹಳೇ ಪಿಂಚಣಿ ನೀತಿಯನ್ನೇ ಅನುಸರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಸಿಎಂ ಗೆ ಶಾಸಕರ ಮೂಲಕ ಮನವಿ ಪತ್ರ ಈ ಸಂದರ್ಭದಲ್ಲಿ ಸಲ್ಲಿಸಲಾಯಿತು.