ವಾಲ್ಮೀಕಿ ಭವನ ಪೂರ್ಣಗೊಳಿಸಲು ಒತ್ತಾಯ

ರಾಯಚೂರು,ನ.೧೫- ನಗರದಲ್ಲಿ ವಾಲ್ಮೀಕಿ ಭವನ ಅಪೂರ್ಣಗೊಂಡಿದ್ದು,ಕೂಡಲೇ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ,ತಾಲೂಕು ವಾಲ್ಮೀಕಿ ನಾಯಕ ಸಂಘ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಹೋಬಳಿ ಮಟ್ಟದಲ್ಲಿ ಬಿಎ. ಬಿ.ಎಸ್.ಸಿ ಬಿಕಾಂ ಪದವಿ ಕಾಲೇಜು ಮತ್ತು ಬಾಲಕ,ಬಾಲಕಿಯರ ವಸತಿ ನಿಲಯ,ಗ್ರಾಮ ಪಂಚಾಯತ ಮಟ್ಟದಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳನ್ನು ಮತ್ತು ಬಾಲಕ ,ಬಾಲಕಿಯರ ವಸತಿ ನಿಲಯ ಮಂಜೂರು ಮಾಡಬೇಕು ಹಾಗೂ ತಾಲೂಕಿನ ಎಲ್ಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಮಯಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ವಾಲ್ಮೀಕಿ ಭವನ ಉಳಿದ ಕಾಮಗಾರಿಗಳಾದ ಲೈಟ್,ನಳ,ಫ್ಯಾನ್,ವಾಲ್ಮೀಕಿ ಭವನ ಮುಂದುಗಡೆ ಮತ್ತು ಹಿಂದುಗಡೆ ಇರುವ ಕಲ್ಲುಗಳನ್ನು ತೆಗೆದು ಗುಂಡಿಗಳನ್ನು ಮುಚ್ಚಬೇಕು.ಮತ್ತು ಭವನದ ಸುತ್ತ ಕಂಪೌಂಡ ಗೋಡೆಯನ್ನು ನಿರ್ಮಿಸಬೇಕು.ಭವನ ಹತ್ತಿರ ಉಳಿದಿರುವ ಜಮಿನನ್ನ ಕಾರ್ ಮತ್ತು ವಾಹನಗಳು ನಿಲುಗಡೆಗಾಗಿ ಉಳಿದಿರುವ ೩೦ ಗಂಟೆ ಜಮೀನನ್ನು ಭವನಕ್ಕೆ ಮಂಜೂರು ಮಾಡಬೇಕು.ಮತ್ತು ಒಬ್ಬ ಗುಮಸ್ತನನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕೆ.ಶಿವಕುಮಾರ ನಾಯಕ,ಶಿವಪ್ಪ ನಾಯಕ,ರಂಗಸ್ವಾಮಿ ನಾಯಕ,ಹನುಮೇಶ ನಾಯಕ,ಭೀಮರಾಯ ನಾಯಕ ವಕೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.